Latest

ಜಿಐಟಿ ಯಲ್ಲಿ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಆರಂಭ

 ಆರೋಗ್ಯ ಕ್ಷೇತ್ರದಲ್ಲಿ ನೈಪುಣತೆ ಹೊಂದಿರುವ ಪ್ರಭುದ್ಧ ವ್ಯವಸ್ಥೆ ಅವಶ್ಯಕತೆ ಇದೆ – ಪ್ರೊ . ರೋಚಾ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪ್ರಪಂಚದಾದ್ಯಂತದ ಇವತ್ತಿನ ಆರೋಗ್ಯ ಕ್ಷೇತ್ರದಲ್ಲಿನ ವ್ಯವಸ್ಥೆಗಳು ಜನಸಂಖ್ಯೆಗೆ ಮತ್ತು ಜನರ ಬೇಡಿಕೆಗೆ ಅನುಸಾರವಾಗಿ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಾರಣ ಸಂಶೋಧನೆಯ ಕೊರತೆ. ಇದನ್ನು ನೀಗಿಸಲು ತಂತ್ರಜ್ಞರಾದ ನಾವುಗಳು ಹೆಚ್ಚಿನ ನಾವಿನ್ಯತೆಯ ಪ್ರಕಲ್ಪಗಳೊಂದಿಗೆ ಸಂಶೋಧನೆಯ ಮುಖಾಂತರ ಹೊಸ ಹೊಸ ಮತ್ತು ಸುಸಜ್ಜಿತ ತಾಂತ್ರಿಕ ವ್ಯವಸ್ಯೆಗಳನ್ನು ಸಮಾಜಕ್ಕೆ ಕೊಡಬೇಕಾಗಿದೆ ಎಂದು ಕೊಇಂಬ್ರಾ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಆಲ್ವಾರೋ ರಾಚೊ ಅಭಿಪ್ರಾಯ ಪಟ್ಟರು.

ಅವರು ಶುಕ್ರವಾರ  ಅಂತರಾಷ್ಟ್ರೀಯ ಖ್ಯಾತಿಯ ಐ ಇ ಇ ಇ ಸಂಸ್ಥೆಯ ತಾಂತ್ರಿಕ ಸಹಯೋಗದೊಂದಿಗೆ ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ಮೂರು ದಿನಗಳ  “ಇಂಟರ್ ನ್ಯಾಷನಲ್ ಕಾನ್ಫರನ್ಸ ಆನ್ ಕಂಪ್ಯೂಟೇಷನಲ್ ಟೆಕ್ನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಸಿಸ್ಟಮ್ಸ್ ( ಸಿಟೆಮ್ಸ್ -18 )” ನ್ನು  ಉದ್ಘಾಟಿಸಿ ಸಮ್ಮೇಳನದ ಮುಖ್ಯ ಭಾಷಣ ಮಾಡುತಿದ್ದರು.

ಸಾಂಪ್ರದಾಯಿಕ ಕಾಯಿಲೆಯ ಚಿಕಿತ್ಸೆಯ ವಿಧಾನಗಳು ಪ್ರಸ್ತುತ ಜನರ ಮತ್ತು ರೋಗಗಳ ನಿವಾರಣೆಗೆ ಬೇಕಾಗುವ ಅಗತ್ಯಗಳನ್ನು ಪೂರೈಸಲು ಆಗುತ್ತಿಲ್ಲ . ಆದ್ದರಿಂದ ತಾಂತ್ರಿಕವಾಗಿ ಪ್ರಬುದ್ಧ ವ್ಯವಸ್ಥೆಗಳು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ ಅಧ್ಯಕ್ಷಿಯ ನುಡಿಗಳನ್ನಾಡಿದರು.

ಸಮ್ಮೇಳನದ ಜಂಟಿ ಕಾರ್ಯಾಧ್ಯಕ್ಷ ಪ್ರೊ. ಎಸ್. ಕೆ. ನಿರಂಜನ್ ಮತ್ತು ಸಮ್ಮೇಳನದ ಆಯೋಜನಮಂಡಳಿ ಅಧ್ಯಕ್ಷೆ  ಡಾ, ವೀಣಾ ದೇಸಾಯಿ ಸಮ್ಮೇಳನದ ಬಗ್ಗೆ ವಿವರಿಸಿದರು. ಸಮ್ಮೇಳನದ ಜಂಟಿ ಕಾರ್ಯಾಧ್ಯಕ್ಷ ಹಾಗೂ ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಸಮ್ಮೇಳನದ ತಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರೊ. ವಿಜಯ್ ರಾಜಪುರೋಹಿತ ಅತಿಥಿಗಳನ್ನು ಪರಿಚಯಿಸಿದರು, ಸಮ್ಮೇಳನದ ಆಯೋಜನ ಕಾರ್ಯದರ್ಶಿ ಪ್ರೊ. ಎಂ. ಎಂ. ನಡಕಟ್ಟಿ ವಂದಿಸಿದರು. ಆಹ್ವಾನಿತ ಉಪನ್ಯಾಸಕರು, ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ಈ ಸಮ್ಮೇಳನದಲ್ಲಿ 130 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮತ್ತು ರಾಷ್ಟೀಯ ಸಂಸ್ಥೆಗಳಿಂದ ಆಗಮಿಸಿದ ಸಂಶೋಧನ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

                                                                                                                          

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button