Latest

*ಸಂಪೂರ್ಣ ಮೊಬೈಲ್ ಅಂಗಡಿಯನ್ನೇ ದೋಚಿ ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿಯಲ್ಲಿನ ಕಳ್ಳರ ಕೈಚಳಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯರಾತ್ರಿ ಅಂಗಡಿಗೆ ನುಗ್ಗಿದ ಇಬ್ಬರು ಕಳ್ಳು ಅಂಗಡಿಯಲ್ಲಿದ್ದ ಮೊಬೈಲ್ ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ದೋಚಿದ್ದಾರೆ. ಅಂಗಡಿಯಲ್ಲಿದ್ದ 2 ಲಕ್ಷ ರೂಪಯೈ ನಗರು, 55 ಮೊಬೈಲ್ ಫೋನ್ ಗಳು, ಇತರೆಸಾಮಾನುಗಳನ್ನು ಚೀಲದಲ್ಲಿ ತುಂಬಿಕೊಂಡು ಅಂಗಡಿಯಿಂದ ಪರಾರಿಯಾಗಿದ್ದಾರೆ.

ಕಳ್ಳರು ಅಂಗಡಿ ದೋಚುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವಾಜಿನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button