ಪ್ರಗತಿವಾಹಿನಿ ಸುದ್ದಿ : ರೇಣುಕಾಸ್ವಾಮಿ ಕೊಲೆ ಕೇಸ್ ನ A1 ಆರೋಪಿ ಪವಿತ್ರಾ ಗೌಡ ರಿಲೀಸ್ ಆಗಿದ್ದಾರೆ. ಬರೋಬ್ಬರಿ 6 ತಿಂಗಳ ಬಳಿಕ ಜೈಲಿನಿಂದ ದರ್ಶನ್ ಗೆಳತಿ ಹೊರಬಂದಿದ್ದು, ಮನೆಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಪವಿತ್ರ ಗೌಡ ಗೆ ಡಿಸೆಂಬರ್ 13ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬೇಲ್ ಸಿಕ್ಕರೂ, ಜಾಮೀನು ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಹೀಗಾಗಿಯೇ ಮೂರು ದಿನ ಪವಿತ್ರಾ ಜೈಲಿನಲ್ಲೇ ಇರಬೇಕಾಗಿತ್ತು. ಕೊನೆಗೂ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಸೋಮವಾರ ಸಂಜೆಯೇ ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿತ್ತು, ಆದ್ರೆ ಸೂಕ್ತ ಸಮಯಕ್ಕೆ ಜೈಲು ಅಧಿಕಾರಿಗಳಿಗೆ ಡಾಕ್ಯುಮೆಂಟ್ಸ್ ತಲುಪಿದ ಕಾರಣ ಪವಿತ್ರ ಜೈಲಿನಿಂದ ಹೊರಬಂದಿರಲಿಲ್ಲ. ಇವತ್ತು 10 ಗಂಟೆ ವೇಳೆಗೆ ಪವಿತ್ರಾ ಗೌಡ ರಿಲೀಸ್ ಆಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಪವಿತ್ರಾಗೌಡ, ಕೊಲೆ ಪ್ರಕರಣದ ಎ1 ಆರೋಪಿಯಾಗಿದ್ದಾರೆ. ಜೈಲಿನಿಂದ ನೇರವಾಗಿ ಪವಿತ್ರಾ ಗೌಡ RR ನಗರ ಬಡಾವಣೆ ಯ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಪವಿತ್ರಾ ಗೌಡ ಸ್ವಾಗತಕ್ಕೆ ಕುಟುಂಬ ಸದಸ್ಯರು ತಯಾರಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ