Belagavi NewsBelgaum NewsPolitics

*ಅಧಿವೇಶನ ಅತೃಪ್ತಿ‌ ತಂದಿದೆ; ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಸಮಸ್ಯೆಗಳ ಚರ್ಚೆಯೇ ಮಾಡಿಲ್ಲ: ಛಲವಾದಿ ನಾರಾಯಣಸ್ವಾಮಿ ಕಿಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತು ಚರ್ಚೆ ಆಗಬೇಕಿತ್ತು ಆದರೆ ಭ್ರಷ್ಟಾಚಾರ ತೇಪೆ ಹಚ್ಚುವ ಅದನ್ನು ಮುಚ್ಚಿಕೊಳ್ಳುವ ಕೆಲಸ ಮಾಡಿದರು. ಅಧಿವೇಶನ ತೃಪ್ತಿ ತಂದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.‌

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಆಗಲಿಲ್ಲ.‌ ಕಿತ್ತೂರು ಕರ್ನಾಟಕ ಸಮಗ್ರ ಕರ್ನಾಟಕ ಕುರಿತು ಚರ್ಚೆ ಮಾಡಲಿಲ್ಲ. ಚಳಿಗಾಲದ ಅಧಿವೇಶನ ಅತೃಪ್ತಿ‌ ತಂದಿದೆ. ಕೆಐಡಿಬಿಯಲ್ಲಿ ಭ್ರಷ್ಟಾಚಾರ ಆಗಿದೆ. ಅದನ್ನು  ತನಿಖೆ ಮಾಡುತ್ತಿಲ್ಲ. ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬೇಕಾದವರಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಖಾಲಿ‌‌ ಜಾಗ ಅವರ ಬುಟ್ಟಿಗೆ ಹಾಕಿದ್ದಾರೆ. ರಾಯಚೂರ ಥರ್ಮಲ್ ಪವರ್ ಪ್ಲಾಂಟ್ ಬಣ್ಣ ಬಳಿಯಲು 120 ಕೋಟಿ‌ ರೂಪಾಯಿ ನಿಗದಿ ಮಾಡಿದ್ದಾರೆ. ಥರ್ಮಲ್ ಪವರ್ ಪ್ಲಾಂಟ್ ಗೆ ಬಣ್ಣ ಮಾಡೋಕೆ 120 ಕೋಟಿ ರೂಪಾಯಿ ಬೇಕಾ? ವಾಲ್ಮೀಕಿ, ಮುಡಾ ಹಗರಣ ಹಾಗೂ ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ. ನಾನು ರಾಜ್ಯದ ಜನರ ಕ್ಷಮೆ ಕೊರುವೆ. ಎಷ್ಟೇ ಕೇಳಿದರೂ ಸರ್ಕಾರ ಚರ್ಚೆ ಮಾಡಲು‌ ತಯಾರಿಲ್ಲ. ಗ್ಯಾರಂಟಿ ಬಿಟ್ಟು ಸರ್ಕಾರದ ಬಳಿ ಬೇರೆ ಮಾತಿಲ್ಲ ಗ್ಯಾರಂಟಿಗಳೇ ಪರ್ಮಮನೆಂಟ್ ಅಲ್ಲ. ಇಷ್ಟು ದಿನ ಜನರು ಉಪವಾಸ ಇದ್ದರಾ. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಮಾಡಬೇಕುಮ ಗ್ಯಾರಂಟಿ‌ಯಲ್ಲೇ ಸರ್ಕಾರ ಮುಗಿದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button