ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಕಿತ್ತೂರು ಉತ್ಸವದ ಮೂರನೇಯ ದಿನ ಶುಕ್ರವಾರ ಅ.(೨೫) ಕವಿ ಗೋಷ್ಠಿ, ಕ್ರೀಡೆಗಳು, ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯ ಮಟ್ಟದ ಕವಿ ಗೋಷ್ಠಿ:
ಚೆನ್ನಮ್ಮನ ಕಿತ್ತೂರು ವೀರರಾಣಿ ಕಿತ್ತೂರು ಚನ್ನಮ್ಮನ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ರೈತರ ತವಕ ತಲ್ಲಣಗಳು ಮತ್ತು ನೆರೆ ಹಾವಳಿ ವಿಷಯದ ಮೇಲೆ ರಾಜ್ಯ ಮಟ್ಟದ ಕವಿ ಗೋಷ್ಠಿ ನಡೆಯಲಿದೆ
ಧಾರವಾಡ ಹಿರಿಯ ಸಾಹಿತಿಗಳು ಡಾ. ಲೀಲಾ ಕಲಕೋಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಧಾರವಾಡ ಹಿರಿಯ ಸಾಹಿತಿಗಳು ಡಾ. ವಿದ್ಯಾ ಕುಂದರಗಿ ಅವರು ಅಧ್ಯಕ್ಷತೆಯನ್ನು ವಹಿಸುವರು.
ಬೈಲಹೊಂಗಲ ಕೆ.ಆರ್.ಸಿ.ಇ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಸಂಗಮನಾಥ ಲೋಕಾಪುರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಿತ್ತೂರು ಚೆನ್ನಮ್ಮನ ಕಸಾಪ ಅಧ್ಯಕ್ಷರಾದ ಡಾ. ಸೋಮಶೇಖರ ಹಲಸಗಿ ಅವರು ಸ್ವಾಗತ ಹಾಗೂ ಕಿತ್ತೂರು ಚೆನ್ನಮ್ಮನ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ಅವರು ವಂದಿಸುವರು. ವಿವೇಕ ಕುರಗುಂದ ಅವರು ನಿರೂಪಿಸುವರು.
ಸಮಾರೋಪ ಸಮಾರಂಭ:
ನಿಚ್ಚಣಕಿ ಮಠ ಮಡಿವಾಳೇಶ್ವರ ಶ್ರೀಗುರು ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಕಾದರವಳ್ಳಿ ಶಿಮೀಮಠ ಶ್ರೀ ಡಾ. ಪಾಲಾಕ್ಷ ಶಿವಯೋಗಿಶ್ವರರು ದಿವ್ಯ ಸಾನಿಧ್ಯ ವಹಿಸುವರು.
ಕಾರ್ಯಕ್ರಮಲ್ಲಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ.ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಉಪಸ್ಥಿತಿತರಿರುವರು.
ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.
ಬಾಳಾಸಾಹೇಬ ದೇಸಾಯಿ, ಅರವಿಂದ ದೇಸಾಯಿ ಮತ್ತು ಮಲಸರ್ಜ ದೇಸಾಯಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
೩.೩೦ ರಿಂದ ೩.೪೫ ರವರೆಗೆ-ಜಾನಪದ ಕಾರ್ಯಕ್ರಮ, ೩.೪೫ ರಿಂದ ೪ ಗಂಟೆಯವರೆಗೆ -ಗೀಗೀ ಪದಗಳು, ೪ ರಿಂದ ೪.೧೫ ರವರೆಗೆ-ಸೊಬಾನ ಪದಗಳು ಕಾರ್ಯಕ್ರಮ, ೪.೧೫ ರಿಂದ ೪.೩೦ ರವರೆಗೆ-ಜನಪದ ಸಂಗೀತ ಕಾರ್ಯಕ್ರಮ, ೪.೩೦ ರಿಂದ ೪.೪೫ ರವರಿಗೆ-ಸುಗಮ ಸಂಗೀತ ಕಾರ್ಯಕ್ರಮ, ೪.೪೫ ರಿಂದ ೫ ಗಂಟೆಯವರಿಗೆ-ಯೋಗ ಪ್ರದರ್ಶನ ಕಾರ್ಯಕ್ರಮ, ೫ ರಿಂದ ೫.೧೫ ರವರಿಗೆ-ಯೋಗ ಪ್ರದರ್ಶನ ಕಾರ್ಯಕ್ರಮ, ೫.೧೫ ರಿಂದ ೫.೩೦ ರವರಿಗೆ-ದಾಸವಾಣಿ ಕಾರ್ಯಕ್ರಮ, ೫.೩೦ ರಿಂದ ೫.೪೫ ರವರಿಗೆ-ಭರತನಾಟ್ಯ ಕಾರ್ಯಕ್ರಮ, ೫.೪೫ ರಿಂದ ೬.೩೦ ರವರಿಗೆ-ಭರತನಾಟ್ಯ ಕಾರ್ಯಕ್ರಮ, ೬.೩೦ ರಿಂದ ೭ ಗಂಟೆಯವರಿಗೆ -ಸುಗಮ ಸಂಗೀತ ಕಾರ್ಯಕ್ರಮ, ೭ ರಿಂದ ೮ ಗಂಟೆಯವರಿಗೆ-ಸಮಾರೂಪ ಸಮಾರಂಭ, ೮ ರಿಂದ ೮.೩೦ ರವರಿಗೆ-ರೂಹಿ ಸೂಫಿ-ಸೂಪಿ ಸಂಗೀತ ಕಾರ್ಯಕ್ರಮ, ೮.೩೦ ರಿಂದ ೮.೪೫ ರವರಿಗೆ-ಕುಚುಪುಡಿ ನೃತ್ಯ ಕಾರ್ಯಕ್ರಮ, ೮.೪೫ ರಿಂದ ೯ ಗಂಟೆವರಿಗೆ ಕಂಶಾಳೆ ನೃತ್ಯ ರೂಪಕಗಳ ಕಾರ್ಯಕ್ರಮ, ೯ ರಿಂದ ೯.೧೫ ರವರಿಗೆ ಜನಪದ ಸಂಗೀತ ಕಾರ್ಯಕ್ರಮ, ೯.೧೫ ರಿಂದ ೯.೩೦ ರವರಿಗೆ ನೃತ್ಯ ವೈವಿದ್ಯ ಕಾರ್ಯಕ್ರಮ, ೯.೩೦ ರಿಂದ ೧೦ ಗಂಟೆವರಿಗೆ-ಸಮೂಹ ನೃತ್ಯ ಕಾರ್ಯಕ್ರಮ, ೧೦ ರಿಂದ ೧೦.೧೫ ರವರೆಗೆ-ನೃತ್ಯ ರೂಪಕ ಕಾರ್ಯಕ್ರಮ, ೧೦.೧೫ ರಿಂದ ೧೨ ಗಂಟೆವರಿಗೆ ರಸಮಂಜರಿ ಕಾರ್ಯಕ್ರಮ, ೧೨ ರಿಂದ ೧ ಗಂಟೆವರಿಗೆ ಶ್ರೀ ಕೃಷ್ಣ ಪಾರಿಜಾತ ನಾಟಕ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ