*ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಅಂದಿದ್ರೆ ಸುಮ್ಮನಿರ್ತಿದ್ರಾ? ಸಿ.ಟಿ ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೆಂಡಾಮಂಡಲ*
ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೂ ಪತ್ರ ಬರೆದು ದೂರು ನೀಡುತ್ತೇನೆ ಎಂದ ಸಚಿವರು
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಎಂ ಎಲ್ ಸಿ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ದೇನೆ. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ. ಸಿ.ಟಿ.ರವಿ ಅವರ ಪದ ಬಳಕೆಗೆ ಇಡೀ ಕರ್ನಾಟಕದ ಜನತೆ ಛೀಮಾರಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ದಿನ ನನಗೆ ಬಹಳಷ್ಟು ಆಘಾತವಾಗಿತ್ತು. ನಿಮ್ಮ ಮನೆ ಹೆಣ್ಣುಮಗಳಿಗೆ ಹೀಗೆ ಹೇಳಿದ್ರೆ ಸುಮ್ಮನಿರ್ತೀರಾ? ಹೇಗಾಗುತ್ತದೆ? ನಾನು ಸಿ.ಟಿ ರವಿ ವಿರುದ್ಧ ಹೋರಾಟ ಮಾಡ್ತೀನಿ. ಮತ್ತೆ ಸಭಾಪತಿ ಅವರಿಗೆ ದೂರು ನೀಡುತ್ತೇನೆ ಎಂದು ಗುಡುಗಿದರು. ನನ್ನ ಬಳಿ ಇರುವ ದಾಖಲೆ ಬಿಡುಗಡೆ ಮಾಡುತ್ತೇನೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ.
ಏನಾಗಿದೆ? ಎಷ್ಟು ಗಾಯವಾಗಿದೆ? ಸಿಟಿ ರವಿ ಅವರೇ ನನಗೆ ಆ ಪದ ಬಳಿಕೆ ಮಾಡಿದ್ದೀರಾ. ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡ್ತಿನಿ. ಎನ್ ಕೌಂಟರ್ ಅಂತಿರಾ ನಾಚಿಕೆ ಆಗಲ್ವಾ. ಇಡೀ ಕರ್ನಾಟಕ ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.
ಕಾನೂನು ಪ್ರಕಾರ ಪೊಲೀಸರು ಎನ್ ಮಾಡಬೇಕು ಮಾಡಿದ್ದಾರೆ. ಮೂಲ ಕಾರಣ ಬಿಟ್ಟು ಉಳಿದಿದ್ದು ಹೇಳಿತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ.
ಎಲ್ಲಾ ನ್ಯಾಯಾಲಯ ಮುಗಿದ ಮೇಲೆ ದೇವನೊಬ್ಬನು ಇದ್ದಾರೆ. ಪ್ರಧಾನಿ, ರಾಷ್ಟ್ರಪತಿ ಪತ್ರ ಬರುತ್ತೇನೆ, ಸಾಧ್ಯವಾದ್ರೆ ಭೇಟಿ ಯಾಗುತ್ತೇನೆ ಎಂದರು.
ಮಾನ, ಮಾರ್ಯಾದೆ ಇಲ್ಲದವರು ಈ ರೀತಿ ಮಾತನಾಡುತ್ತಾರೆ. ನಾನು ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆಯವರಿಗೆ ಹೀಗೆ ಅಂದ್ರೆ ಸುಮ್ಮನಿರ್ತಿದ್ರಾ? ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಇಡೀ ಹೆಣ್ಣುಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸೇರಿ ಅನೇಕರು ನನಗೆ ಧೈರ್ಯ ಹೇಳಿದ್ದಾರೆ. ಬೆಳಗಾವಿ ಶಾಂತಿಯ ತೋಟ. ನಾಲಿಗೆಯ ಸ್ವಚ್ಛ ಇಟ್ಟಕೊಂಡು ಯಾರ ಬೇಕಾದ್ರು ಬರಬಹುದು. ಮೋಸ್ಟ್ ವೆಲ್ ಕಮ್ ಎಂದರು.
ಯಾವುದಕ್ಕೂ ಕಾರಣಕ್ಕೂ ಸಿಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ. ಬಿಜೆಪಿಯವರು ಯಾರಾದರೂ ಒಬ್ಬರು ಬಂದು ಕ್ಷಮೆ ಕೇಳಿದ್ದಾರಾ? ಎಂದು ಪ್ರಶ್ನಿಸಿದರು.
ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು.ಬೇಗ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು. ಇಂತಹ ನೂರು ಸಿಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಸುಮ್ಮನೆ ಕುಳಿತುಕೊಳ್ಳುವ ಹೆಣ್ಣು ಮಗಳಲ್ಲ. ಹೋರಾಟ ಮಾಡುತ್ತೇನೆ. ಪ್ರತಿಯೊಬ್ಬರೂ ನಮ್ಮ ಜೊತೆಗೆ ಇದ್ದಾರೆ. ಪ್ರಿಯಾಂಕಾ ಗಾಂಧಿಯಿಂದ ಹಿಡಿದುಕೊಂಡು ಎಲ್ಲರೂ ಪೋನ್ ಮಾಡಿ ಮಾತಾಡಿದ್ದಾರೆ. ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಮಹಿಳೆಯರೆಲ್ಲರೂ ನನ್ನ ಜೊತೆ ಇದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ