Belagavi NewsBelgaum NewsKannada NewsKarnataka NewsPolitics

*ಸರ್ಕಾರದ ವಿರುದ್ಧ ಬಸವಜಯ ಮೃತ್ಯುಂಜಯ ಶ್ರೀ‌ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಪಂಚಮಸಾಲಿ ಹೋರಾಟದಲ್ಲಿ ಮಾನವಿಯತೆಯ ಕಗ್ಗೋಲೆಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಕೂಡಲಸಂಗಮ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜೀಗಳು ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಜನರ ಭಾವನೆ ಅರಿಯಲು ಸಂಧಾನ ಸಂವಾದ ಸಂಘರ್ಷ ಎಂಬ ಧೈಯದೊಂದಿಗೆ ಪ್ರತಿ ಗ್ರಾಮಸಭೆಗಳಿಗೆ ಭೇಟಿ ನೀಡಿ ತಾಲೂಕಾಮಟ್ಟದಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನವನ್ನು ಕೈಗೊಂಡು ಪಂಚಮಸಾಲಿಗರ ಮುಂದಿನ ಹೋರಾಟದ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದರು. 

ಸರ್ಕಾರಕ್ಕೆ ಪಂಚಮಸಾಲಿ ವಕೀಲರು ಹೈಕೋರ್ಟಗೆ ಮೊರೆ ಹೋದ ಹಿನ್ನೆಲೆ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಪಂಚಮಸಾಲಿ ಹೋರಾಟದಲ್ಲಿ ಗಾಯಗೊಂಡವರಿಗೆ ಬಸವರಕ್ಷಾ ಪತ್ರವನ್ನು ನೀಡಿ ಆತ್ಮಸ್ಥೆರ್ಯವನ್ನು ತುಂಬುವ ಕೆಲಸ ಮಾಡಲಾಗುತ್ತಿದೆ. ಮೀಸಲಾತಿ ಪಡೆದೇ ಪಡೆಯುತ್ತೇವೆಂದು ತಮ್ಮ ಜನ್ಮದಿನದ ಅಂಗವಾಗಿ ರಕ್ತವನ್ನ ಚೆಲ್ಲಿಸಿದ್ದೀರಿ, ಮೀಸಲಾತಿಯನ್ನು ಪಡೆದೇ ನಡೆಯುತ್ತಿರಿ ಎಂಬ ಧೈಯ ವಾಕ್ಯದೊಂದಿಗೆ ರಕ್ತದಾಸೋಹವನ್ನು ಮಾಡಲಾಗುತ್ತಿದೆ ಎಂದರು.

ಜನರ ಭಾವನೆ ಅರಿಯಲು ಸಂಧಾನ ಸಂವಾದ ಸಂಘರ್ಷ ಎಂಬ ಧೈಯದೊಂದಿಗೆ ಪ್ರತಿ ಗ್ರಾಮಸಭೆಗಳಿಗೆ ಭೇಟಿ ನೀಡಿ ತಾಲೂಕಾಮಟ್ಟದಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನವನ್ನು ಆರಂಭಿಸಲಾಗುವುದು. ಪಂಚಮಸಾಲಿಗರ ಮೇಲೆ ಲಾಠಿ ಚಾರ್ಜ್ ಮಾಡಿದವರಿಗೆ ಬಹುಮಾನ ನೀಡಿದ್ದು, ನೋವು ತಂದಿದೆ. ಲಾಠಿ ಚಾರ್ಜ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ಇದು ವರೆಗೂ ಶಾಂತಿಯುತವಾದ ಹೋರಾಟ- ಇನ್ಮುಂದೆ ಕ್ರಾಂತಿಯುತವಾಗಿ ನಡೆಸುತ್ತೇವೆ ಎಂದರು.

ಎಲ್ಲೆಡೆ ಸರ್ಕಾರದ ನೀತಿಗೆ ಸಮಾಜದಿಂದ ಖಂಡನೆ ವ್ಯಕ್ತವಾಗಿದೆ. ಸಿಎಂ ನಮ್ಮ ಹೋರಾಟವನ್ನು ಅಸಂವಿಧಾನ ಎಂದು ನೀಡಿದ ಹೇಳಿಕೆಯೇ ಅಸಂವಿಧಾನ. ಪಂಚಮಸಾಲಿ ಸಮಾಜ ಸದ್ಯ 3 ಬಿ ಯಿಂದ 2 ಎ ಮೀಸಲಾತಿ ಕೇಳಲಾಗುತ್ತಿದೆ. ಜನರ ಬಳಿ ಹೋಗಿ ಅಭಿಪ್ರಾಯ ಪಡೆದು ಮುಂದಿನ ಹೋರಾಟವನ್ನು ರೂಪಿಸಲಾಗುವುದು. ವಿಧಾನಸಭೆಯಲ್ಲಿ ಇಷ್ಟು ಸದನಗಳು ನಡೆದರೂ ಸಮಾಜಕ್ಕಾಗಿ ಯಾರು ಧ್ವನಿ ಎತ್ತಿರಲಿಲ್ಲ. ಪ್ರಪ್ರಥಮವಾಗಿ ಧ್ವನಿ ಎತ್ತಿದವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳರು. ಆಮೇಲೆ ಸಮಾಜದ ಶಾಸಕರು ಈ ಬಾರಿಯ ಸದನದಲ್ಲಿ ಚರ್ಚಿಸಿದರು.

ನೀವು ಕೈ ಕಡಿದರೇ, ನಾವೂ ಕೈತುತ್ತು ಕೊಡುತ್ತೇವೆ. ಯಾವುದೇ ಜಾತಿ ಜನಾಂಗದ ವಿರೋಧ ನಮ್ಮ ಸಮಾಜಕ್ಕಿಲ್ಲ. ಕೆಲ ಜನರು ಈ ವಿಷಯವನ್ನು ರಾಜಕಾರಣ ಮಾಡುತ್ತಾರೆ. ಪ್ರತಿ 10 ವರ್ಷಕ್ಕೆ ಹಿಂದುಳಿದವರಿಗೆ ಮೀಸಲಾತಿ ಪರಿಷ್ಕರಿಸುವ ನಿಯಮವನ್ನು ಯಾರೂ ಪಾಲಿಸಿಲ್ಲ ಎಂದರು. 2022 ರಲ್ಲಿ ಪಂಚಮಸಾಲಿ ಸಮಾಜದ ಗಣತಿಯನ್ನು ಮಾಡಲಾಗಿದೆ. ವರದಿ ಕೂಡ ಸಿಕ್ಕಿದೆ. 2 ಡಿ ಮೀಸಲಾತಿ ಇದರ ಆಧಾರದಲ್ಲೇ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಓರ್ವ ವಕೀಲ ವೃತ್ತಿಯಿಂದ ಬಂದವರಾದರೂ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಆಯಾ ರಾಜ್ಯ ಸರ್ಕಾರಕ್ಕೆ ಮೀಸಲಾತಿ ನೀಡುವ ಹಕ್ಕನ್ನು ಸುಪ್ರೀಂಕೋರ್ಟ್ ನೀಡಿದೆ. ಕಾನೂನು ಅಡತಡೆಗಳನ್ನು ದೂರವಾಗಿಸಿ ಸಂವಿಧಾನಬದ್ಧವಾಗಿ ಮೀಸಲಾತಿ ನೀಡಲಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button