Kannada NewsKarnataka NewsNationalPolitics

*ಐದು ರಾಜ್ಯಗಳ ರಾಜ್ಯಪಾಲರ ನೇಮಕ ಮಾಡಿದ ರಾಷ್ಟ್ರಪತಿ ದೌಪದಿ ಮುರ್ಮು*

ಪ್ರಗತಿವಾಹಿನಿ ಸುದ್ದಿ: ದೇಶದ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿಗಳು ಹೆಸರುಗಳನ್ನು ಘೋಷಣೆ ಮಾಡಿದ್ದಾರೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಇದೇ ವೇಳೆ ಇಬ್ಬರು ಹೊಸ ರಾಜ್ಯಪಾಲರನ್ನು ಕೂಡ ನೇಮಕ ಮಾಡಿದ್ದಾರೆ. 

ನೆರೆಯ ರಾಜ್ಯ ಕೇರಳದ ಆರಿಫ್ ಮೊಹಮ್ಮದ್ ಖಾನ್ ರನ್ನ ಬಿಹಾರಕ್ಕೆ, ಮಣಿಪುರದ ಅಜಯ್ ಕುಮಾರ್ ಭಲ್ಲಾ ಅವರನ್ನು ನೇಮಿಸಲಾಗಿದೆ. ಇನ್ನುಳಿದಂತೆ ಇತರ ಮೂವರನ್ನು ಮರು ನಿಯೋಜಿಸಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಯ ಪರಿಸ್ಥಿತಿಯ ನಡುವೆ ಮಧ್ಯೆ ಭಲ್ಲಾ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಈಗ ಬಿಹಾರಕ್ಕೆ ಮರು ನಿಯೋನೆಗೊಂಡಿದ್ದಾರೆ. ಒಡಿಶಾಕ್ಕೆ ವರ್ಗಾವಣೆಗೊಂಡಿರುವ ಮಿಜೋರಾಂ ರಾಜ್ಯಪಾಲರಾಗಿದ್ದ ಹರಿ ಬಾಬು ಕಂಬಂಪತಿ ಮತ್ತು ನಿವೃತ್ತ ಅಧಿಕಾರಿ ಜನರಲ್‌ ಡಾ.ವಿಜಯ್ ಕುಮಾ‌ರ್ ಸಿಂಗ್ ಸೇರಿದ್ದಾರೆ.ಇನ್ನು ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳಕ್ಕೆ ನೇಮಕ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button