*ಸಿ.ಟಿ ರವಿ ಪ್ರಕರಣ: ಸಿಪಿಐ ಅಮಾನತ್ತು ಆಗಿದ್ದು ಇಲಾಖೆಯ ನಿರ್ಧಾರವಾಗಿದೆ: ಗೃಹ ಸಚಿವರ ಸ್ಪಷ್ಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿ.ಟಿ ರವಿ ಪ್ರಕರಣದಲ್ಲಿ ಕರ್ತವ್ಯಲೋಪದಡಿ ಖಾನಾಪೂರ ಠಾಣೆಯ ಸಿಪಿಐ ಅಮಾನತ್ತು ಮಾಡಲಾಗಿದ್ದು, ಅವರನ್ನು ಅಮಾನತ್ತು ಮಾಡಲು ಇಲಾಖೆ ನಿರ್ಧಾರ ಕೈಗೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡದ ಅವರು, ಇಲಾಖೆಯವರು ಇಲ್ಲಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ನಾವು ಯಾವ ಡೈರೆಕ್ಷನ್ ಸೂಚನೆ ಕೊಡುವುದಿಲ್ಲ ಎಂದರು.
ಸ್ಪೇಸಿಫಿಕ್ ಆಗಿ ಅವರನ್ನು ಅಮಾನತು ಮಾಡಲು ಏನು ಕಾರಣ, ಸಿ.ಟಿ ರವಿ ನೀಡಿದ ದೂರು ಎಲ್ಲವೂ ಸೇರಿ ಸಿಐಡಿಗೆ ಪ್ರಕರಣ ಕೊಟ್ಟಿದ್ದೇವೆ, ಈಗಾಗಲೇ ಸಿಐಡಿ ತನಿಖೆಗೆ ನಾವು ಆದೇಶ ಕೊಟ್ಟಿದ್ದೇವೆ, ಗೃಹ ಸಚಿವನಾಗಿ ಆ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಗಳ ಹೇಳಿಕೆ ಕೊಡಲ್ಲ, ಇಂದು ಸಭೆ ಕರೆದದ್ದು ಗಾಂಧಿ ಭಾರತ ಕಾರ್ಯಕ್ರಮ ಕುರಿತು ಭದ್ರತೆಗಾಗಿ. ಡಿ.26 ಹಾಗೂ 27 ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಯುತ್ತೆ. ಆ ಕಾರ್ಯಕ್ರಮಕ್ಕೆ ಏನೆಲ್ಲ ಸೆಕ್ಯೂರಿಟಿ, ಪ್ರೊಟೊಕಾಲ್ ಮೆಂಟೇನ್ ಮಾಡಬೇಕು ಎಂದು ಸಭೆ ಮಾಡಿದ್ದೇನೆ ಎಂದರು.
ಅಧಿವೇಶನ ಸಂದರ್ಭ ಬಂದ ಸುಮಾರು ನಾಲ್ಕೂವರೆ ಸಾವಿರ ಪೊಲೀಸರನ್ನು ಇರಿಸಿಕೊಂಡಿದ್ದೇವೆ. ಇಂದಿನ ಸಭೆಯಲ್ಲಿ ಸಿ.ಟಿ.ರವಿ ಪ್ರಕರಣ ಕುರಿತು ಯಾವುದೇ ಚರ್ಚೆ ಆಗಿಲ್ಲ. ಕೇವಲ ಕಾಂಗ್ರೆಸ್ ಅಧಿವೇಶನ ಭದ್ರತೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರನ್ನು ಕರೆಯಿಸಿ ಯಾರ್ಯಾರು ಬರ್ತಾರೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇವೆ. ಈಗಾಗಲೇ ಮೂರು ವಿಶೇಷ ವಿಮಾನಗಳು ಬರುತ್ತಿವೆ. ಪ್ರತಿಯೊಬ್ಬರನ್ನೂ ಸ್ವಾಗತ ಮಾಡಿಕೊಡಲು ಒಬ್ಬರೊಬ್ಬನ್ನು ಅಸೈನ್ ಮಾಡಿದ್ದೇವೆ. ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ 26 ಜನರನ್ನು ಅಂದೇ ಪೊಲೀಸರು ಬಂಧಿಸಿ ಸಂಜೆಯವರೆಗೂ ಅವರನ್ನು ಇಟ್ಟುಕೊಂಡು ವಾರ್ನಿಂಗ್ ಮಾಡಿ ತಮ್ಮ ಕ್ರಮ ಕೈಗೊಂಡಿದ್ದಾರೆ. ಈಗ ಎರಡೂ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ