ಪ್ರಗತಿವಾಹಿನಿ ಸುದ್ದಿ: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣದ ಬೆನ್ನಲ್ಲೇ ಮುನಿರತ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿತ್ತು. ಘಟನೆ ಬಳಿಕ ತನ್ನನ್ನು ಕೊಲೆಗೆ ಯತ್ನಿಸಲಾಗಿದೆ. ಘಟನೆಗೆ ಡಿ.ಕೆ.ಸಹೋದರರು, ಹನುಮಂತರಾಯಪ್ಪ, ಕುಸುಮಾ ಹಾಗೂ ಕೆಲ ರೌಡಿಗಳು ಕಾರಣ ಎಂದು ನೇರವಾಗಿ ಆರೋಪಿಸಿದ್ದರು.
ಘಟನೆ ಬಳಿಕ ಮಲ್ಲೇಶ್ವರಂ ನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಹೊರಬಂದಿದ್ದ ಮುನಿರತ್ನ ಬಳಿಕ ತಲೆ ಸುತ್ತು ಬರುತ್ತಿದೆ ಎಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ಗಂಟೆಗಳ ಕಾಲ ಮುನಿರತ್ನ ಅವರನ್ನು ಆಬ್ಸರ್ ವೇಷನ್ ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ