*ಪುಷ್ಪಾ-2 ಪ್ರಿಮೀಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ: ಮೃತ ಮಹಿಳೆಯ ಕುಟುಂಬಕ್ಕೆ 2 ಕೋಟಿ ಪರಿಹಾರ*
ಪ್ರಗತಿವಾಹಿನಿ ಸುದ್ದಿ : ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ನಟನೆಯ ಪುಷ್ಪಾ-2 ಸಿನಿಮಾದ ಪ್ರಿಮೀಯರ್ ಶೋ ವೇಳೆ ಕಾಲ್ತುಳಿದಲ್ಲಿ ಮೃತಪಟ್ಟ ಮಹಿಳಾ ಅಭಿಮಾನಿ ಸಾವು ಪ್ರಕರಣ ಸಂಬಂಧ ಮೃತಳ ಕುಟುಂಬಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ ಅವರು 1 ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಮೃತ ರೇವತಿ ಕುಟುಂಬಕ್ಕೆ ಸಿನಿಮಾದ ನಿರ್ದೇಶಕರಿಂದ ರೂ.50 ಲಕ್ಷ ಹಾಗೂ ನಿರ್ಮಾಪಕರಿಂದ ತಲಾ ರೂ.50 ಲಕ್ಷವನ್ನು ಘೋಷಣೆ ಮಾಡಲಾಗಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ಮೊತ್ತ ಪರಿಹಾರದ ರೂಪದಲ್ಲಿ ನೀಡಲು ಅನೌನ್ಸ್ ಮಾಡಲಾಗಿದೆ. ಒಟ್ಟು 2 ಕೋಟಿ ರೂಪಾಯಿ ಪರಿಹಾರವಾಗಿ ನೀಡಲು ನಾವು ತೀರ್ಮಾನಿಸಿದ್ದಾಗಿ ಅಲ್ಲು ಅರವಿಂದ ಹೇಳಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಿವಾಸದ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾಗ, ಭಾರೀ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಘಟನೆ ನಡೆದಾಗ ರೇವತಿ ಎಂಬುವವರು ಸಾವನ್ನಪ್ಪಿದ್ದು ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ