ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷ ಸಂಭ್ರಮಿಸಲು ಪ್ರವಾಸಿ ತಣಗಳಿಗೆ, ರಾಜ್ಯದ ದೇವಾಲಗಳಿಗೆ ಜನ ಸಾಗರೇ ಹರಿದುಬರುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಕೆಲ ಪ್ರವಸಿ ತಾಣಗಳಿಗೆ ನಿರ್ಬಂಧ ಹೇರಿದೆ.
ನಂದಿಬೆಟ್ಟ, ಚಾಮುಮ್ಡಿ ಬೆಟ್ಟ, ಕೆ.ಆರ್.ಎಸ್ ಹಿನ್ನೀರು ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕೆಲ ರೆಸಾರ್ಟ್, ಹೋಂ ಸ್ಟೇಗಳಲ್ಲಿ ಡಿಜೆ ಹಾಗೂ ಸ್ಪೀಕರ್ ಬಳಕೆಗಳನ್ನು ನಿಷೇಧಿಸಲಾಗಿದೆ.
ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಡಿ.31ರ ಬೆಳಿಗ್ಗೆ 6 ಗಂತೆಯಿಂದ ಜನವರಿ 1 ಸಂಜೆ 7 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಇಂದು ಸಂಜೆ 7 ಗಂಟೆ ಬಳಿಕ ಜನವರಿ 1 ರ ಬೆಳಗಿನ ವರೆಗೆ ನಿರ್ಬಂಧ ಹೇರಲಾಗಿದೆ. ಕೆ.ಆರ್.ಎಸ್ ಹಿನ್ನೀರು, ಬಲಮುರಿ, ಎಡಮುರಿ, ಕಾವೇರಿ ನದಿ ತೀರ ಪ್ರದೇಶಗಳಿಗೆ ಜನವರಿ 1ರ ರಾತ್ರಿವರೆಗೂ ನಿಷೇಧವಿರಲಿದೆ.
ಮಳವಳ್ಳಿ ತಾಲೂಕಿನ ಮುತ್ತುತ್ತಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ