Belagavi NewsBelgaum NewsNationalPolitics

*NIFTEM ಸ್ಥಾಪನೆಯ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್: ಸಂಸದ ಶೆಟ್ಟರ್ ಸಂತಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಇಂದು ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು  ಭೇಟಿ ಮಾಡಿ, ಬೆಳಗಾವಿಯಲ್ಲಿ NIFTEM ಸ್ಥಾಪನೆಗೆ ಮನಸಿ ಸಲ್ಲಿಸಿದರು.‌

ಜಗದೀಶ ಶೆಟ್ಟರ್ ಅವರು ಇತ್ತೀಚಿಗೆ ನವದೆಹಲಿಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವರಾದ ಚಿರಾಗ ಪಸ್ವಾನ್ ಇವರನ್ನು ಭೇಟಿ ಮಾಡಿ ಈ ಕುರಿತು ಮನವಿ ಅರ್ಪಿಸಿದ್ದು ಇಲ್ಲಿ ಸ್ಮರಣೀಯ.

National Institute of food technology entrepreneurship and Management (NIFTEM) ಸ್ಥಾಪನೆಗೆ ಸದ್ಯ ಅಗತ್ಯ ಪ್ರಸ್ತಾವನೆಯು ಅನುಮೋದನೆ ಅಥವಾ ಅಗತ್ಯ ಅನುದಾನ ಮಂಜೂರಾತಿಗಾಗಿ ಕೇಂದ್ರ ಹಣಕಾಸು ಸಚಿವರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯವು ಮಂಡಿಸುತ್ತಿದ್ದು, ಇದಕ್ಕೆ ಅನುಮೋದನೆ ನೀಡಿ ತಮ್ಮಲ್ಲಿನ ರೈತರಿಗೆ, ಮಧ್ಯಮವರ್ಗದವರಿಗೆ, ಗ್ರಾಹಕರಿಗೆ, ಕ್ಷೇತ್ರದ ಎಲ್ಲ ಜನತೆಗೆ ಅನುಕೂಲತೆಯನ್ನು ಕಲ್ಪಿಸಿ ಕೊಡುವಂತೆ ಜಗದೀಶ ಶೆಟ್ಟರ ಅವರು  ನಿರ್ಮಲಾ ಸೀತಾರಾಮನ್ ಗೆ ಮನವಿ ಸಲ್ಲಿಸಿದರು.

ಬೇಡಿಕೆಯನ್ನು ಅವಲೋಕಿಸಿದ ನಿರ್ಮಲಾ ಸೀತಾರಾಮನ್ ಅವರು National Institute of food technology entrepreneurship and Management (NIFTEM) ಬೆಳಗಾವಿಯಲ್ಲಿ ಸ್ಥಾಪಿಸುವ ಕುರಿತಾದ ಮಂಡಿಸುವ ಪ್ರಸ್ತಾವನೆಗೆ ಅಗತ್ಯವಾಗಿ ಅನುಮೋದನೆ ನೀಡುವ ಬಗ್ಗೆ ಭರವಸೆಯನ್ನು ನೀಡಿದ್ದಾಗಿ ಸಂಸದ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button