ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹಲವು ದಿನಗಳಿಂದ ಶೀತಗಾಳಿ, ಮೈಕೊರೆವ ಚಳಿ ಹೆಚ್ಚಾಗಿದ್ದು, ಚಳಿ ತಡೆಯಲಾಗದೇ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಾಗೇಶ್ (47) ಮೃತ ವ್ಯಕ್ತಿ. ಚಾಮರಾಜಪೇಟೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ನಿವಾಸಿ. ಮೈಸೂರಿನ ಚಲುವಾಂಬಾ ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದೆ. ನಾಗೇಶ್ ಪತ್ನಿ ಹೆರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಒಳಗೆ ಪತ್ನಿ ಹೆರಿಗೆಯಾಗಿದ್ದರೆ ಆಸ್ಪತ್ರೆ ಆವರಣದಲ್ಲಿ ಪತಿ ಉಸಿರು ಚೆಲ್ಲಿದ್ದಾರೆ.
ವಿಪರೀತ ಚಳಿ ಇದ್ದರು ಆಸ್ಪತ್ರೆಯ ಆವರಣದಲ್ಲಿ ರಗ್ಗು ಹೊದ್ದು ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಎಷ್ಟು ಹೊತ್ತಾದರೂ ಎದ್ದಿಲ್ಲ. ಮುದುಡಿಕೊಂಡು ಮಲಗಿದ್ದ ವ್ಯಕ್ತಿ, ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಭಾರಿ ಚಳಿಯಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ