Belagavi NewsBelgaum News

*ಇಂಡಿಯಾ ಇನಿಶಿಯೇಟಿವ್‌ನಲ್ಲಿ ಬೆಳಗಾವಿ ‘Accessible Cities’ ಅಡಿಯಲ್ಲಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA), ಮತ್ತು ಐ ಫಾರ್ ಹ್ಯುಮಾನಿಟಿ ಫೌಂಡೇಶನ್, ತನ್ನ ಪ್ರಮುಖ ಯೋಜನೆ-ಸ್ಮಾರ್ಟ್ ಸಿಟೀಸ್ ಮಿಷನ್ ಮೂಲಕ ‘Accessible Cities’ initiatives ಪ್ರಾರಂಭಿಸಿದೆ. ಹಿರಿಯ ನಾಗಕರು ವಿಕಲಚೇತನರು, ಮಹಿಳೆಯರು ಮತ್ತು ಮುಂಬರುವ ವರ್ಷಗಳಲ್ಲಿ ಮಕ್ಕಳು ಸೇರಿದಂತೆ ಬಳಕೆದಾರರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಅಳವಡಿಸುವ ಉದ್ದೇಶ ಹೊಂದಿದೆ.

ಈ ಉಪಕ್ರಮಕ್ಕಾಗಿ 100 ಸ್ಮಾರ್ಟ್ ಸಿಟಿಗಳಲ್ಲಿ 10 ಸ್ಮಾರ್ಟ್ ಸಿಟಿಗಳನ್ನು ಆಯ್ಕೆ ಮಾಡಲಾಗಿದೆ, ಅವುಗಳಲ್ಲಿ ಬೆಳಗಾವಿ ಕೂಡ ಒಂದು ಆಗಿರುತ್ತದೆ. ಆಯ್ಕೆಗಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (BSCL) ಕೈಗೊಂಡ ವಿವಿಧ Inclusive ಕಾಮಗಾರಿಗಳು ಉದಾಹರಣೆಗೆ ಥೀಮ್ ಬೇಸ್ ಉದ್ಯಾನವನಗಳು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ಮಹಾತ್ಮ ಫುಲೆ ಉದ್ಯಾನ, ಮತ್ತು ಇತರ ಯೋಜನೆಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಲಿಂಗ ಸಮಾನತೆ ಯೋಜನೆಗಳಿಗಾಗಿ BSCL ವಿಶ್ವಸಂಸ್ಥೆಯ – ಸ್ಮಾರ್ಟ್ ಪರಿಹಾರ ಮತ್ತು ಅಂತರ್ಗತ ನಗರಗಳ ಪ್ರಶಸ್ತಿಯನ್ನು ಪಡೆದಿದೆ

‘Accessible Cities’ initiatives 2 ಅನುವು ಮಾಡಿಕೊಡುತ್ತದೆ. ಅಲ್ಲದೆ, ಹೋಟೆಲ್‌ಗಳು, ಬ್ಯಾಂಕ್‌ಗಳ ಶಾಖೆಗಳು’, ಎಟಿಎಂಗಳು ಮತ್ತು ಎಲಿವೇಟರ್‌ಗಳಲ್ಲಿ ಸಾರ್ವತ್ರಿಕ ಮಾರ್ಗಸೂಚಿಗಳನ್ನು ಅಳವಡಿಸಲು ಸಹಾಯ ಮಾಡುತ್ತದೆ. ಆತಿಥ್ಯ ಉದ್ಯಮ,

Γ

ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಎಲಿವೇಟರ್ ತಯಾರಕರಿಗೆ ಮಾರ್ಗದರ್ಶನ ನೀಡುತ್ತದೆ. ‘ಪ್ರವೇಶಿಸಬಹುದಾದ ಆತಿಥ್ಯ’, ‘ಪ್ರವೇಶಸಾಧ್ಯ ಬ್ಯಾಂಕಿಂಗ್’ ಮತ್ತು ‘ಪ್ರವೇಶಸಾಧ್ಯ ಎಲಿವೇಟರ್‌ಗಳು’ ಉಪಕ್ರಮಗಳನ್ನು ಪ್ರಾರಂಭಿಸಲಾಯಿತು. ಆರಂಭಿಕ ಹಂತದಲ್ಲಿ, 10 ನಗರಗಳು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಅದರಲ್ಲಿ ಚಂಡೀಗಢ, ಸಾಗರ್, ಸತ್ನಾ, ಜಬಲ್ಪುರ್, ಡೆಹ್ರಾಡೂನ್ ಬೆಳಗಾವಿ, ಪುಣೆ, ರಾಯ್‌ಪುರ, ಲಕ್ಕೋ ಮತ್ತು ವಾರಣಾಸಿ ಸೇರಿದಂತೆ ನಗರಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾನ್ವಿತ ಕೇಂದ್ರೀಯ ರಾಜ್ಯ ಸಚಿವರಾದ ಶ್ರೀ ತೋಖಾನ್ ಸಾಹು ಅವರು ಎಲ್ಲಾ ಯೋಜನೆಗಳಲ್ಲಿ ಸಾರ್ವತ್ರಿಕ ವಿನ್ಯಾಸ ಮತ್ತು ಮಾನದಂಡಗಳನ್ನು ಅಳವಡಿಸಲು ಮತ್ತು ದೇಶದ ಎಲ್ಲಾ ನಾಗರಿಕರನ್ನು ಒಳಗೊಳ್ಳಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ಪ್ರತಿಜ್ಞೆ ಮಾಡುವ ಮೂಲಕ ಉಪಕ್ರಮಕ್ಕೆ ಚಾಲನೆ ನೀಡಿದರು. ಈ ಉಪಕ್ರಮಗಳು 2015 ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ಭಾರತದ ‘ಪ್ರವೇಶಸಾಧ್ಯ ಭಾರತ ಅಭಿಯಾನ’ (ಸುಗಮ್ಯ ಭಾರತ್ ಅಭಿಯಾನ) ದೊಂದಿಗೆ ಹೊಂದಿಕೊಂಡಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button