Kannada NewsKarnataka News

ಕಿತ್ತೂರು ಮತ್ತು ತಿಗಡೊಳ್ಳಿ ರಸ್ತೆ ಹ್ಯಾಂಗ್ ಕಿತ್ತೋಗಿದೆ ನೋಡಿ

ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು: ಕಳೆದ ಏಳೆಂಟು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಿತ್ತೂರು ಮತ್ತು ತಿಗಡೊಳ್ಳಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ತಿಗಡೊಳ್ಳಿಯಿಂದ ಸುಮಾರು ಏಳು ಕಿ.ಮೀ. ದೂರವಿರುವ ಕಿತ್ತೂರಗೆ ಪ್ರತಿದಿನ ಸಾವಿರಾರು ಜನ ಸಂಚಾರ ಮಾಡುತ್ತಾರೆ. ವಿದ್ಯಾಭ್ಯಾಸಕ್ಕಾಗಿ ಶಾಲಾ -ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರು ಇಲ್ಲಿಂದ ಪ್ರತಿದಿನ ಕಿತ್ತೂರು ಸೇರಿದಂತೆ  ಬೆಳಗಾವಿ, ಧಾರವಾಡ, ಹುಬ್ಬಳ್ಳಿಗೆ ಬಸ್, ಖಾಸಗಿ ವಾಹನ ಹಾಗೂ ಬೈಕ್ ಮುಖಾಂತರ ಸಂಚರಿಸುತ್ತಾರೆ.
ಆದರೆ ಸಂಚಾರ ಮಾಡಬೇಕಾದರೆ ಕೈಯಲ್ಲಿ ಜೀವ ಹಿಡಿದುಕೊಂಡೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ  ಗುಂಡಿಗಳು ಹಾಗೂ ಕಲ್ಲಿನ ರಾಶಿಗಳಿಂದ ತುಂಬಿದೆ. ರಸ್ತೆಯಲ್ಲಿ ಸಂಚರಿಸುವಾಗ ಸಾಕಷ್ಟು ಜನ ಬೈಕ್  ಮೇಲಿಂದ ಬಿದ್ದಿರುವ ಉದಾರಣೆಗಳಿವೆ. ಆದರೂ ಈ ಕಡೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದೆ ಕಣ್ಣಿದ್ದೂ ಕುರುಡರಂತೆ ಕುಳಿತಿರುವುದು ಪ್ರತಿದಿನ ಸಂಚರಿಸುವ ಜನರಿಗೆ  ಅಸಮಾಧಾನ ತಂದಿದೆ.
ಕಳೆದ ಎರಡು-ಮೂರು ತಿಂಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾದ ಕಾರಣ ರಸ್ತೆ ಹದಗೆಟ್ಟಿತ್ತು. ಆದರೆ ಸಂಬಂಧಪಟ್ಟ ಇಲಾಖೆಯವರು ತಾತ್ಕಾಲಿಕವಾಗಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿದರು. ಆದರೆ ಮೊನ್ನೆ ನಿರಂತರ ಸುರಿದ ಮಳೆಯಿಂದ ದೊಡ್ಡ ಪ್ರಮಾಣದ  ತಗ್ಗುಗಳು ಬಿದ್ದು  ಜನರ ಸಂಚಾರ ಅಸ್ತವ್ಯಸ್ತವಾಗಿದೆ. ಇದನ್ನು ಹೀಗೇ ಬಿಟ್ಟರೆ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ನಿತ್ಯ ಸಂಚರಿಸುವ ಜನರಿಗೆ ತುಂಬಾ ತೊಂದರೆ ಆಗುತ್ತದೆ. ಆದಷ್ಟು ಬೇಗ ಇದನ್ನು ಹೊಸ ರಸ್ತೆಯನ್ನು ನಿರ್ಮಾನಿಸಲು  ಜನರು ಒತ್ತಾಯಿಸುತ್ತಿದ್ದಾರೆ.
ತಿಗಡೊಳ್ಳಿಯಿಂದ  ರಸ್ತೆ  ಕಳೆದ ಒಂದುವರೆ ವರ್ಷದಿಂದ ಹದಗಟ್ಟಿದ್ದು,  ಬಸ್ಸುಗಳು ಸರಿಯಾಗಿ ಬರದ ಹಿನ್ನೆಲೆ  ಪ್ರತಿದಿನ ಸಂಚರಿಸುವ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ  ತುಂಬ ತೊಂದರೆಯಾಗಿದೆ. ಈ ರಸ್ತೆಯ ನಿರ್ಮಾಣಕ್ಕೆ  ಶಾಸಕರಿಗೆ ಎರಡು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
 -ಶಾವಂತ ಕಿರಬನ್ನಬರ, ಗ್ರಾ.ಪಂ.ಸದಸ್ಯರು
ಕಿತ್ತೂರು ಮತ್ತು ತಿಗಡೊಳ್ಳಿಗೆ ನೂತನ ರಸ್ತೆ ಮಂಜೂರಾಗಿದ್ದು, ಆದಷ್ಟು ಬೇಗ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತದೆ.
-ಮಹಾಂತೇಶ ದೊಡಗೌಡರ, ಶಾಸಕರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button