Belagavi NewsBelgaum News

*ಲಕ್ಷ್ಮೀ ಹೆಬ್ಬಾಳಕರ್ ನೋಡಲು 48 ಗಂಟೆ ಯಾರೂ ಬರಬೇಡಿ: ವೈದ್ಯರ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಚ್ಚು ಜನರು ಮೇಡಂ ಅವರನ್ನು ನೋಡಲು ಬರುತ್ತಿದ್ದರಿಂದ ಅವರಿಗೆ ತೊಂದರೆ ಆಗುತ್ತಿದೆ. ನಿನ್ನೆ ಸಂಜೆ ಅವರಿಗೆ ತಲೆ ನೋವು ಹಾಗೂ ಚಕ್ರ ಬರುವುದು ಜಾಸ್ತಿ ಆಗಿತ್ತು. ಅವರಿಗೆ ರೆಸ್ಟ್ ಅವಶ್ಯಕಥೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ, ರವಿ ಪಾಟೀಲ್‌ ಹೇಳಿದರು.‌

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರಿಗೆ ಸಧ್ಯ 12 ರಿಂದ 14 ಗಂಟೆ ನಿದ್ದೆಗೆ ಅವಕಾಶ ನೀಡಬೇಕು. 48 ಗಂಟೆಗಳ ಕಾಲ ಅವರಿಗೆ ಯಾರೂ ‌ತೊಂದರೆ ಮಾಡಬೇಡಿ. ಅವರ ಮಗ ಮೃಣಾಲ್ ಇರ್ತಾರೆ ದಯವಿಟ್ಟು ಬರುವವರು ಅವರನ್ನು ಭೇಟಿಯಾಗಿ ಮಾತನಾಡಿ ಎಂದು ಮನವಿ ಮಾಡಿದರು.

ಕುತ್ತಿಗೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತೊಂದರೆ ಆಗುತ್ತಿದೆ. ಅಭಿಮಾನಿಗಳು ರಿಸ್ಟ್ರಿಕ್ಷನ್ ಹಾಕಿದರೂ ಸಹ ಭೇಟಿ ಆಗಲು ಬರುತ್ತಿದ್ದಾರೆ. ಓವರ್ ಎಕ್ಸಿಕ್ಷನ್ ಮತ್ತು ಹೆಚ್ಚಿಗೆ ಮಾತನಾಡುತ್ತಿರುವುದರಿಂದ ಅವರಿಗೆ ತೊಂದರೆ ಆಗುತ್ತಿದೆ ಎಂದರು.

ಯಾರೂ ಬೇರೆ ವೈದ್ಯರು ಚಿಕಿತ್ಸೆ ನೀಡಲು ಬರುತ್ತಿಲ್ಲ. ನಾವೇ ಟ್ರೀಟ್ಮೆಂಟ್ ಮಾಡ್ತಿವಿ. ರಾಜಕಾರಣಿಗಳು ಆಸ್ಪತ್ರೆಗೆ ನೋಡಲು ಬರೋದು ಬೇಡ. ನಿನ್ನೆಯಿಂದ ಅವರ ಸಿಸ್ಟರ್ ಮತ್ತು ಅವರ ತಾಯಿಯೇ ನೋಡಲು ಬಂದಿಲ್ಲ. ದಯವಿಟ್ಟು ಅವರಿಗೆ ತೊಂದರೆ ಮಾಡಬೇಡಿ ಎಂದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button