Belagavi NewsBelgaum NewsPolitics

*ಶೆಟ್ಟರ್ ಬಿಜೆಪಿ ಬಿಟ್ಟು ಬಂದಾಗ ಆಡಿದ ನುಡಿ ಮುತ್ತುಗಳನ್ನು ನೆನಪಿಸಿಕೊಳ್ಳಲಿ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾಂಗ್ರೆಸ್ ಸಮಾವೇಶ ಬಗ್ಗೆ ಟೀಕಿಸಿದ್ದ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಜಗದೀಶ್ ಶೆಟ್ಟರ್ ಅವರು ಬಂದರೆ ಒಂದು ಟೂರ್ ಕರೆದುಕೊಂಡು ಹೋಗುತ್ತೇನೆ ಎಂದು ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ಆಡಿದ ನುಡಿ ಮುತ್ತುಗಳನ್ನು ನೆನಪು ಮಡಿಕೊಳ್ಳಲಿ. ಅವರು ಬಂದರೆ ನಾನೇ ಅವರನ್ನು ಟೂರ್ ಕರೆದುಕೊಂದು ಹೋಗುತ್ತೇನೆ. ಸಂಸದರಾಗಿ, ಲೋಕಸಭಾ ಸದಸ್ಯರಾಗಿ ಎಲ್ಲೆಲ್ಲಿ ಏನೇನು ಮಾಡಿದ್ದಾರೆ ಎಂಬುದನ್ನು ಅವರು ನಮಗೆ ಹೇಳಲಿ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button