ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ -64ನೇ ಕನ್ನಡ ರಾಜ್ಯೋತ್ಸವ ಶುಕ್ರವಾರ ಬೆಳಗಾವಿ ಜಿಲ್ಲೆಯಾದ್ಯಂತ ಸಂಭ್ರಮ ಮೂಡಿಸಿತ್ತು. ಬೆಳಗಾವಿ ಮಹಾನಗರದಲ್ಲಿ ಭೃಹತ್ ಜನಸಾಗರದ ಮಧ್ಯೆ ಕನ್ನಡ ಹಬ್ಬ ಆಚರಿಸಿದರೆ, ಜಿಲ್ಲೆಯ ಮೂಲೆ ಮೂಲೆಯಲ್ಲೂ ಕನ್ನಡ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕನ್ನಡ ಧ್ವಜಾರೋಹಣ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು. ಕೇಂದ್ರ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಹಳ್ಳಿ ಹಳ್ಳಿಯಿಂದ ಹಾಗೂ ನಗರದ ವಿವಿಧ ಭಾಗಗಳಿಂದ ಜನಸಾಗರವೇ ಹರಿದುಬಂದಿತ್ತು. ವೈವಿದ್ಯಮಯ ಸ್ಥಬ್ಧಚಿತ್ರಗಳೊಂದಿಗೆ ಅದ್ಧೂರಿಯ ಮೆರವಣಿಗೆ ನಡೆಯಿತು.
ಅಗಸಗಿಯಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ
ಮಹಾಂತೇಶ ನಗರ ರಹವಾಸಿಗಳ ಶಿಕ್ಷಣ ಸಂಸ್ಥೆ
ಮಹಾಂತೇಶ ನಗರ ರಹವಾಸಿಗಳ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ೬೪ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಆಶಾ ಖಡಪಟ್ಟಿ ಖ್ಯಾತ ಸಾಹಿತಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅತ್ಯಂತ ಹಿರಿದಾದ ಕನ್ನಡ ನಾಡು, ಭಾಷೆ, ಸಂಸ್ಕೃತಿ, ಇತಿಹಾಸವನ್ನು ಹೊಂದಿದೆ. ಈ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ. ಈ ನಾಡು ನುಡಿ ಸೇವೆಗೆ ನಾವೆಲ್ಲರು ಕಂಕಣ ಬದ್ದರಾಗೊಣ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ಡಾ.ಎನ್.ಜಿ.ಬಟ್ಟಲ ಪ್ರಾಚಾರ್ಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ನಮ್ಮೆಲ್ಲರ ಹೆಸರುಗಳ ಮುಂದೆ ಕನ್ನಡತಿ ಹಾಗೂ ಕನ್ನಡಿಗ ನಾಮ-ವಿಶೇಷಣಗಳನ್ನು ಬಳಕೆ ಮಾಡುವುದರ ಮೂಲಕ ನಿತ್ಯ ಜೀವನದಲ್ಲಿ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ.ಎಸ್.ಎಂ.ಬಡ್ಡೂರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕನ್ನಡ ನಮ್ಮ ಉಸಿರು ಕನ್ನಡವನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು. ಅನೀಲ.ಬಾ.ಪಾಟೀಲ ಮತ್ತು ಎಸ್.ಎಂ.ಶೈಲಜಾ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೊಜಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡ ಅಭಿಮಾನವನ್ನು ಬೆಳೆಸುವಂತಹ ಕನ್ನಡ ಗೀತೆಗಳನ್ನು ಮತ್ತು ನೃತ್ಯವನ್ನು ಪ್ರಸ್ತುತಪಡಿಸಿದರು.
ಜಗದೀಶ್ ಶೆಟ್ಟರ್ ಚೀನಾ ಪ್ರವಾಸ ರದ್ದು
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಾಹಿತ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ