ಪ್ರಗತಿವಾಹಿನಿ ಸುದ್ದಿ: ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ ಇಲ್ಲೋರ್ವ ಖದೀಮ, ಎಟಿಎಂಗೆ ಬರುತ್ತಿದ್ದ ಅಮಾಯಕರನ್ನೇ ಟಾರ್ಗೆಟ್ ಮಾಡಿ ಹಣ ಡ್ರಾ ಮಾಡಿಕೊಡುತ್ತೇನೆಂದು ಹೇಳಿ ಎಟಿಎಂ ಬದಲಿಸಿ ಹಣ ದೋಚುತ್ತಿದ್ದವನು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ಪೊಲೀಸರು ಆರೋಪಿ ಕಿರಣ್ ಕುಮಾರ್ ಕಾಳೇಗೌಡ ನನ್ನು ಬಂಧಿಸಿದ್ದಾರೆ. ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬೆಲಸಿಂದ ಗ್ರಾಮದ ನಿವಾಸಿ.
ಬಂಧಿತನಿಂದ 47 ಲಕ್ಷ ರೂ ನಗದು ಹಣ, 28 ಸಾವಿರ ರೂ ಮೌಲ್ಯದ ಮೊಬೈಲ್, ವಿವಿಧ ಬ್ಯಾಂಕ್ ಗಳ 60ಕ್ಕೂ ಹೆಚ್ಚು ಎಟಿಎಂ ಕಾರ್ಡ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಎಟಿಎಂ ಬಳಿಯೇ ಹಣ ಮಡಿಕೊಲ್ಳುವ ನೆಪದಲ್ಲಿ ನಿಲ್ಲುತ್ತಿದ್ದ. ಎಟಿಎಂಗೆ ಬರುವ ಅನಕ್ಷರಸ್ಥರು, ವೃದ್ಧರು, ಅಮಾಯಕರಿಗೆ ಸಹಾಯ ಮಾಡುತ್ತೇನೆ. ಹಣ ಡ್ರಾ ಮಡಿಕೊಡುತ್ತೇನೆ ಎಂದು ಕಾರ್ಡ್ ಪಡೆದು, ಅವರಿಂದ ಪಾಸ್ ವರ್ಡ್ ಪಡೆದು ಬಳಿಕ ಹಣ ಬರುತ್ತಿಲ್ಲ. ಸಮಸ್ಯೆ ಇದೆ ಎಂದು ಹೇಳಿ ತನ್ನ ಬಳಿ ಇದ್ದ ಎಟಿಎಂ ಕಾರ್ಡ್ ಬದಲಿಸಿ ಕೊಡುತ್ತಿದ್ದ. ಬಳಿಕ ಅವರಿಂದ ಪಾಸ್ ವರ್ಡ್ ತಿಳಿದುಕೊಂಡ ಆರೋಪಿ ಬೇರೆ ಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ