*ಮೈಕ್ರೋ ಫೈನಾನ್ಸ್ ಸಾಲ ಕಡ್ಡಾಯವಾಗಿ ತುಂಬಬೇಕು: ಸಚಿವ ಸತೀಶ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಲ ವಸೂಲಿ ಕಾನೂನಿನ ಚೌಕಟ್ಟಿನ ಮೂಲಕ ನೋಟಿಸ್ ನೀಡಿ ಪ್ರಕ್ರಿಯೆ ನಡೆಸಬೇಕು. ಹೊರತು ಯಾವುದೇ ಕಾರಣಕ್ಕೂ ಕಿರುಕುಳಕ್ಕೆ ಮುಂದಾಗಬಾರದು. ಸರ್ಕಾರದಿಂದ ಸಾಲಗಾರರ ಕಿರುಕುಳ ತಪ್ಪಿಸುಬಹದು ಹೊರತು ಸಾಲ ಮನ್ನಾ ಅಸಾಧ್ಯ, ಸಾಲವನ್ನುಕಡ್ಡಾಯವಾಗಿ ತುಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಸಚಿವರು, ಯಾವ ಉದ್ದೇಶ ಸಾಲ ನೀಡಲಾಗುತ್ತಿದೆ ಅದನ್ನು ಸರಿಯಾಗಿ ಪರಿಶೀಲನೆ ಮಾಡುವ ಅಗತ್ಯವಿದೆ. ಮೈಕ್ರೋ ಫೈನಾನ್ಸ್ ದವರು ಗರಿಷ್ಠ ಮೀತಿ ಸಾಲ ನೀಡಬೇಕಾದರ ದಾಖಲಾತಿಗಳನ್ನು ಕೂಲಕುಂಷವಾಗಿಪರಿಶೀಲನೆ ಮಾಡಬೇಕು. ಕಿರುಕುಳ ನೀಡಿ ಸಾಲ ಮರುಪಾವತಿಗೆ ಮುಂದಾದರೇ ಮೈಕ್ರೋ ಫೈನಾನ್ಸಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಾಕೀತು ಮಾಡಿದರು.
ರೆಗ್ಯೂಲರ್ ತುಂಬವವರು ಸಾಲ ತುಂಬಬೇಕು, ಅವರಿಗೆ ಯಾವುದೇ ತೊಂದರೆ ನೀಡದಂತೆ ಕಾಲಾವಕಾಶ ನೀಡಬೇಕು ಸರ್ಕಾರ ಮಟ್ಟದಲ್ಲಿ ಸೂಚನೆ ನೀಡಲಾಗಿದೆ. ಸಾಲವನ್ನು ನಿಧಾನಗತಿಯಲ್ಲಿ ವಸೂಲಿ ಮಾಡಬೇಕಿದೆ. ಮಧ್ಯರ್ವತಿಗಳ ಹಾವಳಿಗೆ ಒಳಗಾಗಿ 15 ಸಾವಿರ ಜನರು ಸಬ್ಸಿಡಿಗೆ ಮೋಸ ಹೋಗಿದ್ದಾರೆ. ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ವಸೂಲಿ ಮಾಡಲು ಅನುಕೂಲ ಮಾಡಿಕೊಡಲಾಗುವುದು. ಸರ್ಕಾರದಿಂದ ಯಾವುದೇ ಸಾಲ ಮನ್ನಾ ಅಸಾಧ್ಯ, ತೆಗೆದುಕೊಂಡವರು ನೀಡಿದರು ಸಹಕಾರ ನೀಡಬೇಕಿದೆ. ಸಾಲವನ್ನು ಶೇ50 ರಷ್ಟು ಪಡೆದು ಮರು ಪಾತಿಸಲು ಹಿಂದೇಟು ಹಾಕುವವರ ಬಗ್ಗೆ ತನಿಖೆ ನಡೆಸಲಾಗುವುದು.
ಬೆಳಗಾವಿ ತಾಲೂಕಿನ ತಾರಿಹಾಳದಲ್ಲಿ ಮೈಕ್ರೋ ಫೈನಾನ್ಸ್ ಸಾಲ ಕಿರುಕುಳ ನೆಪದಲ್ಲಿ ಗುಂಡಾ ವರ್ತನೆ ಮಾಡಲಾಗಿದೆ ಎಂಬ ಮಾದ್ಯಮಗಳ ಪ್ರಶ್ನೆ ಉತ್ತರಿಸಿದ ಸಚಿವರು, ಕಾನೂನಿನ ಪ್ರಕಾರ ಮೈಕ್ರೋ ಫೈನಾನ್ಸ್ ನಡೆದುಕೊಳ್ಳಬೇಕು. ಕಿರುಕುಳಕ್ಕೆ ಅವಕಾಶ ಇಲ್ಲ ಹಾಗೇನಿದರೂ ಕೋರ್ಟ್ ಮೂಲಕ ಸಾಲ ಮರುಪಾವತಿಸಿಕೊಳ್ಳಲಿ. ಇದರಲ್ಲಿ ಇಬ್ಬರದೂ ತಪ್ಪಿದೆ ಸಹಕಾರ ಮಾಡಿಕೊಂಡು ಹೋಗಬೇಕು ಅಷ್ಟೇ ಎಂದು ಸೂಚಿಸಿದರು.
ಮೈಕ್ರೋ ಫೈನಾನ್ಸ್ ಗೆ ಸಾಲ ಮರುಪಾವತಿಸಲು ಬಂದವರಿಗೆ ದಿಕ್ಕು ತಪ್ಪಿದರೆ. ಕ್ರಮ ಕೈಗೊಳ್ಳಲಾಗುವುದು ಅಂತವರ ಹೆಸರು ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಸಾಲ ಮನ್ನಾ ಆಗಲಿದೆ ಎಂಬ ಅವರ ಊಹೆ ಸುಳ್ಳು ಎಂದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಹಾಗೂ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ