ಪ್ರಗತಿವಾಹಿನಿ ಸುದ್ದಿ : ಹೊಟ್ಟೆ ಪಾಡಿಗಾಗಿ ಕಬ್ಬು ಕಟಾವು ಮಾಡಲು ಬಂದ ದಂಪತಿಗಳಿಬ್ಬರ ನಡುವೆ ನಡೆದ ಗಲಾಟೆ ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿದೆ.
ಮಹಾರಾಷ್ಟ್ರ ರಾಜ್ಯದ ಎವತಮಾಳ ಜಿಲ್ಲೆಯ ಮಹಗಾಂವ ತಾಲೂಕಿನ ಚಂಬುರ್ದರಾ ಗ್ರಾಮದ ಬಾಲಾಜಿ ಜಂಗಲೆ ಮತ್ತು ಮೀರಾಬಾಯಿ ಜಂಗಲೆ ಆರು ವರ್ಷದ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ತಮ್ಮ ಹೊಟ್ಟೆ ಪಾಡಿಗಾಗಿ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮಕ್ಕೆ ಹದಿನಾಲ್ಕು ಜನರ ಗುಂಪಿನೊಂದಿಗೆ ಕಬ್ಬು ಕಟಾವು ಮಾಡಲು ಬಂದಿದರು. ಆದರೆ ಆರೋಪಿ ಬಾಲಾಜಿ ಮಧ್ಯಪಾನ ಮಾಡಿ ಬಂದು ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಯ ಜೊತೆ ಜಗಳ ಮಾಡಿದ್ದ, ಜಗಳ ವಿಕೊಪಕ್ಕೆ ತಿರುಗಿ ಕುಪಿತಗೊಂಡ ಬಾಲಾಜಿ ಜಂಗಲೆ(40) ಪತ್ನಿ ಮೀರಾಬಾಯಿ ಜಂಗಲೆಯ (30) ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಇನ್ನು ಸುದ್ದಿ ತಿಳಿದ ಗೋಕಾಕ ಡಿಎಸ್ ಪಿ, ಸಿಪಿಐ,ಪಿ,ಎಸ್,ಐ, ಇವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ