![](https://pragativahini.com/wp-content/uploads/2025/02/IMG_20250206_190558_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಇದ್ದ ಹೆಣ್ಣು ಸಿಂಹ ನಿಧನ ಹೊಂದಿದೆ.
15 ವರ್ಷದ ನಿರುಪಮಾ ಎಂಬ ಹೆಣ್ಣು ಸಿಂಹವು ಇಂದು ರಂದು ಮಧ್ಯಾಹ್ನ 12:55 ಕ್ಕೆ ವೃದ್ದಾಪ್ಯ ಹಾಗೂ ಬಹು ಅಂಗಾಂಗಗಳ ವೈಫಲ್ಯದಿಂದ ಅಸುನಿಗಿದೆ. ನಿರುಪಮಾ ಸಿಂಹವನ್ನು ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿರುತ್ತದೆ. ನಂತರ ಕೇಂದ್ರಿಯ ಮೃಗಾಲಯ ಪ್ರಾಧಿಕಾರವು ನಿಗಧಿಪಡಿಸಿದ ಮಾರ್ಗಸೂಚಿಗಳಂತೆ ಮರಣೋತ್ತರ ಪರೀಕ್ಷೆ ಮಾಡಿ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.
ಸದರಿ ಪ್ರಕ್ರಿಯೆಯಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಮರಿಯ ಕ್ರಿಷ್ಟು ರಾಜಾ, ವಲಯ ಅರಣ್ಯ ಅಧಿಕಾರಿ, ಪವನ ಕುರನಿಂಗ, Multi Specialty Veterinary Hospital ನ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಹಣಮಂತ ಸಣ್ಣಕ್ಕಿ, Regional Research Officer, ಬೆಳಗಾವಿ ತಜ್ಞರಾದ ಡಾ. ಶ್ರೀಕಾಂತ ಕೊಹಳ್ಳಿ, ಮೃಗಾಲಯದ ವೈದ್ಯರಾದ ಡಾ. ನಾಗೇಶ ಹುಯಿಲ್‌ಗೋಳ ಮತ್ತು ಮೃಗಾಲಯದ ಸಿಬ್ಬಂದಿಗಳಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ