Latest

ಮಾರ್ಚ್ 4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಇಲ್ಲಿದೆ ವೇಳಾಪಟ್ಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್​ 4ರಿಂದ  ಆರಂಭವಾಗಲಿವೆ. ಪದವಿಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್​ 23ರವರೆಗೆ ಪರೀಕ್ಷೆ ನಡೆಯಲಿದೆ.

2020ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮೂರು ವಿಷಯಗಳ ವೇಳಾಪಟ್ಟಿಯನ್ನು ಪಿಯು ಮಂಡಳಿ 4 ತಿಂಗಳು ಮುಂಚಿತವಾಗಿ ಪ್ರಕಟಿಸಿದೆ.
ಮಾರ್ಚ್​ 4ಕ್ಕೆ ಇತಿಹಾಸ, ಭೌತಶಾಸ್ತ್ರ, ಗಣಿತ (ಬೇಸಿಕ್​ ಮ್ಯಾಥ್ಸ್​), 5ಕ್ಕೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್​, ಫ್ರೆಂಚ್​, 6ಕ್ಕೆ ಕರ್ನಾಟಕ್​ ಸಂಗೀತ, ಹಿಂದೂಸ್ತಾನಿ ಸಂಗೀತ, 7ಕ್ಕೆ ವ್ಯವಹಾರ ಅಧ್ಯಯನ (ಬ್ಯುಸಿನೆಸ್​ ಸ್ಟಡೀಸ್​), ಸೋಷಿಯಾಲಜಿ, ಕೆಮಿಸ್ಟ್ರಿ, 9ಕ್ಕೆ ಐಟಿ, ರಿಟೇಲ್​, ಆಟೊಮೊಬೈಲ್​, ಹೆಲ್ತ್​ ಕೇರ್​​, ಬ್ಯೂಟಿ ಮತ್ತು ವೆಲ್​ನೆಸ್​, 10ಕ್ಕೆ ಉರ್ದು ಪರೀಕ್ಷೆ ನಡೆಯುವುದು.

ಮಾರ್ಚ್​ 11ಕ್ಕೆ ಆಪ್ಷನಲ್​ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್​,  12ಕ್ಕೆ ಜಿಯೋಗ್ರಫಿ, 13ಕ್ಕೆ ಎಜುಕೇಷನ್​, 14ಕ್ಕೆ ಸೈಕಾಲಜಿ, ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಾನಿಕ್ಸ್​, 16ಕ್ಕೆ ಲಾಜಿಕ್​, ಜಿಯೋಲಜಿ, ಹೋಮ್​ ಸೈನ್ಸ್, ​ 17ಕ್ಕೆ ಎಕನಾಮಿಕ್ಸ್​, ಬಯಾಲಜಿ, 18ಕ್ಕೆ ಹಿಂದಿ, 19ಕ್ಕೆ ಕನ್ನಡ, 20ಕ್ಕೆ ಸಂಸ್ಕೃತ, 21ಕ್ಕೆ ಪೊಲಿಟಿಕಲ್​ ಸೈನ್ಸ್​, ಸ್ಟಾಟಿಸ್ಟಿಕ್ಸ್​ ಮತ್ತು 23ಕ್ಕೆ ಇಂಗ್ಲೀಷ್ ಪರೀಕ್ಷೆ ನಡೆಯುವುದು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button