![](https://pragativahini.com/wp-content/uploads/2025/02/narabali.jpg)
ಪ್ರಗತಿವಾಹಿನಿ ಸುದ್ದಿ: ಜ್ಯೋತಿಷಿ ಹೇಳಿದ ಮಾತು ನಂಬಿ ನಿಧಿ ಆಸೆಗಾಗಿ ಖದೀಮರು ಬಸ್ ನಿಲ್ದಾಣದ ಬಳಿ ಚಪ್ಪಲಿ ಹೊಲಿಯುತ್ತಿದ್ದವನನ್ನೇ ಬಲಿಕೊಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂದು ಹೇಳಿದ್ದ ಜ್ಯೋಷಿತಿ ಓರ್ವರ ಮಾತು ನಂಬಿ ಚಪ್ಪಲಿ ಹೊಲಿಯುವ ವ್ಯಕ್ತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಡಲಾಗಿದೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಘಟನೆ ನಡೆದಿದೆ
ಜ್ಯೀತಿಷಿ ರಾಮಕೃಷ್ಣ ಎಂಬಾತನ ಮಾತು ಕೇಳಿ ವಿಚಾರವನ್ನೂ ಮಾಡದೇ ಆನಂದ್ ರೆಡ್ಡಿ ಎಂಬಾತ ನರಬಲಿ ಕೊಟ್ಟಿದ್ದಾನೆ. ಪ್ರಭಾಕರ್ ಕೊಲೆಯಾದ ವ್ಯಕ್ತಿ. ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಡಬೇಕು ಎಂದು ಜ್ಯೋಷಿತಿ ಸೂಚಿಸಿದಂತೆ ಆಂಧ್ರಮೂಲದ ಆನಂದ್ ರೆಡ್ಡಿ ಭಾನುವರ ಸಂಜೆ ಬೈಕ್ ನಲ್ಲಿ ಬರುತ್ತಿದ್ದಾಗ ಪ್ರಭಾಕರ ನಡೆದು ಬರುತ್ತಿದ್ದ ಈ ವೇಳೆ ಬೈಕ್ ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿಕರೆದೊಯ್ದು ಮಚ್ಚಿನಿದ ಕೊಚ್ಚಿ ಕೊಲೆ ಮಡಿದ್ದಾನೆ.
ಆರೋಪಿ ಆನಂದ್ ಪಾವಗಡದ ಡಾಬಾದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಸದ್ಯ ಪೊಲೀಸರು ಪಾವಗಡದ ಜ್ಯೋತಿಸಿ ರಾಮಕೃಷ್ಣ, ಆರೋಪಿ ಆನಂದ್ ರೆಡ್ಡಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ