![](https://pragativahini.com/wp-content/uploads/2025/02/IMG_20250212_093638_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಕ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟುವದು ಅವಶ್ಯಕವಾಗಿದೆ. ಆರೋಗ್ಯಕರ ಮತ್ತು ಸುರಕ್ಷಿತ ಆನ್‌ಲೈನ್ ಸೇವೆಯನ್ನು ಹೊಂದುವ ದೃಷ್ಟಿಯಿಂದ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಫೆ.11) ಅರುಗಿದೆ ಸುರಕ್ಷಿತ ಅಂತರ್ಜಾಲ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೊಳ ಪಡಿಸುತ್ತಿದ್ದಾರೆ ಈ ವಂಚನೆಗಳ ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು ಎಂದರು.
ಅಂತರ್ಜಾಲದ ಮೂಲಕ ಇಡೀ ಜಗತ್ತಿನ ಮಾಹಿತಿಯನ್ನು ಅಂಗೈಯಲ್ಲಿ ಪಡೆಯಬಹುದು, ಅಂತರ್ಜಾಲದ ಮೂಲಕ ನಾವು ಸಾಕಷ್ಟು ಪ್ರಯೋಜನೆ ಪಡೆದುಕೊಳ್ಳ ಬಹುದಾಗಿದೆ. ಆದರೆ ಅಷ್ಟೇ ಅಪಾಯವು ಇದ್ದು ಬಳಕೆ ಸಂದರ್ಭದಲ್ಲಿ ಭವಿಷ್ಯದಲ್ಲಿ ಸುರಕ್ಷಿತ ಆನ್‌ಲೈನ್ ಸೇವೆ ಅತ್ಯಗತ್ಯವಾಗಿದ್ದು ಇದರ ಸಾಧಕ, ಬಾಧಕಗಳ ಕುರಿತು ಅರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿ, ಸಿಬ್ಬಂದಿಗಳು ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.
ಸೈಬರ್ ಕ್ರೈಮ್ ಎ.ಸಿ.ಪಿ ಜಿ. ರಘು ಅವರು ಮಾತನಾಡಿ ಇಂದು ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಆರ್ಥಿಕ ಅಪರಾದ, ಲೈಂಗಿಕ ಕಿರುಕಳದಂತಹ ಅಪರಾಧಗಳು ಸೇರಿದಂತೆ ಅನೇಕ ಅಪರಾಧಗಲಕು ಅಂತರ್ಜಾಲದ ಮೂಲಕ ನಡೆಯುತ್ತಿವೆ. ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಥರ್ಡ ಪಾರ್ಟಿ ಅಪಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಯವದಕ್ಕೂ ಮುಂಚೆ ಯೋಚಿಸಬೇಕು. ಸೈಬರ ಕೈಂ ಅಪರಾಧಗಳ ಸಂದರ್ಭದಲ್ಲಿ ಆರೋಪಿತನು ತನ್ನ ಗುರುತನ್ನು ಮರೆ ಮಾಡಿರುತ್ತಾನೆ ಅಲ್ಲದೇ ವ್ಯಾಪ್ತಿ ಮೀರಿದ ಪ್ರದೇಶಗಳಿಂದ ವಂಚನೆ ಮಾಡುತ್ತಿರುವದರಿಂದ ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವದು ಸವಾಲಿನ ಹಾಗೂ ಅತ್ಯಂತ ಕ್ಲಿಷ್ಟಕರವಾದ ಪ್ರಕರಣಗಳಾಗಿರುತ್ತವೆ ಎಂದರು.
ಎಂ. ಆಧಾರ, ಸೈಬರ್ ಬೋಲಕ್ತ ಆಪ್, ಮೋನಿ ಆರ್ಮರ್ ಗಳನ್ನು ತಮ್ಮ ಮೋಬೈಲಗಳಲ್ಲಿ ಡೌನಲೋಡ್ ಮಾಡಿಕೊಂಡು ಬಳಸುವದರ ಮೂಲಕ ಸೈಖರ ವಂಚನೆಗೊಳ ಪಡುವದನ್ನು ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸೈಬರ ವಂಚನೆ ಮಾಡುವವರು ಮೋಬೈಲ ಸಂಖ್ಯೆಯಿಂದ ಮಾತನಾಡದೆ ಅಂತರ್ಜಾಲ, ವಾಟ್ಟ ಆಪ್ ಹಾಗೂ ಟೆಲಿಗ್ರಾಂ ಆಪ್ ಮೂಲಕ ಸಂವಹನ ನಡೆಸುತ್ತಾರೆ ಈ ಕುರಿತು ಜಾಗೃತರಾಗಿರಬೇಕು. ಯಾವುದೇ ಬ್ಯಾಂಕು, ಕಂಪನಿ ಹೆಸರು ಹೇಳಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಇಂದು ಸೈಬರ್ ವಂಚಕರು ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದು ಈ ಕುರಿತು ಪ್ರತಿಯೊಬ್ಬರು ಜಾಗೃತರಾಗಿರಬೇಕು. ಸೈಬರ ವಂಚನೆಗೊಳಗಾದ ಸಂಧರ್ಬದಲ್ಲಿ ಮೊದಲ ಒಂದು ಅಥವಾ ಎರಡು ಗಂಟೆಯೊಳಗಾಗಿ 1930 ಸಹಾಯವಾಣಿಗೆ ಕರೆ ಮಾಡಲು ಹೇಳಿದರು.
ಎನ್.ಆಯ್.ಸಿ ಜಿಲ್ಲಾ ಸಂಯೋಜಕರಾದ ಶ್ರೀಶ ಕಡಗದಕ್ಕೆ ಹಾಗೂ ಪೋಲೀಸ್ ಸಿಬ್ಬಂದಿಯಾದ ಮಲ್ಲಿಕಾರ್ಜುನ ಯಾದವಾಡ ಅವರುಗಳು ಮಾತನಾಡಿ, ಇಂಟರ್ನೆಟ್ ಅನ್ನು ಮಾಹಿತಿ ಹಂಚಿಕೊಳ್ಳಲು ಪರಸ್ಪರ ಸಂವಹನಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇಂಟರ್ನೆಟ್ ಮೂಲಕ ವೈರಸ್ ಅಪಾಯ, ಹಣಕಾಸಿನ ವಂಚನೆಗಳು, ದಾರಿ ತಪ್ಪಿಸುವ ಮಾಹಿತಿ ಮುಂತಾದ ಅಪಾಯಗಳನ್ನು ನಾವು ನೋಡಬಹುದಾಗಿದೆ.ಅಂತರ್ಜಾಲ ಬಳಕೆ ಸಂದರ್ಭದಲ್ಲಿ ಅತೀ ಹಾಗರೂಕರಾಗಿರಬೇಕು. ಯಾವುದೇ ಸಂದರ್ಭದಲ್ಲೂ ತಮ್ಮ ವೈಯಕ್ತಿತ ಮಾಹಿತಿಗಳನ್ನು ಹಂಚಿಕೊಳ್ಳದಂತೆ ತಿಳಿಸಿದರು.
ಫಿಶಿಂಗ್ ವೆಬ್ ಸೈಟ್ ಅಧಿಕೃತ ಬ್ಯಾಂಕ್ ವೆಬ್ ಸೈಟ್ ಮಾದರಿಯಲ್ಲೇ ಇದ್ದು ಕೆಲವು ವ್ಯತ್ಯಾಸ ಇರುತ್ತದೆ. ಹಾಗಾಗಿ ವೆಬ್ ಸೈಟ್ ಬಗ್ಗೆ ಅಧಿಕೃತ ಮಾಹಿತಿ ಪಡೆದು ಖಚಿತ ಪಡಿಸಿಕೊಂಡ ಬಳಿಕ ಮಾತ್ರ ಪ್ರವೇಶಿಸಬೇಕು. ಡಿಜಿಟಲ್ ಅರೆಸ್ಟ್ ಎಂಬುದು ಇಂದು ಹೆಚ್ಚು ಕೇಳಿ ಬರುತ್ತಿದೆ. ಇದರಲ್ಲಿ ವಂಚಕರು ಕರೆ ಮಾಡಿ ಸಂವಹನ ನಡೆಸುವ ಮೂಲಕ ವಂಚಿಸಲು ಪ್ರಯತ್ನಿಸುವರು ಇಂತಹ ಸಂದರ್ಭದಲ್ಲಿ ತಮ್ಮ ಹತ್ತಿರದ ಪೋಲಿಸ್ ಠಾಣೆಗೆ ತೆರಳಿ ಈ ಕುರಿತು ದೂರು ದಾಖಲಿಸಬೇಕು. ಅಪರಿಚಿತ ಲಿಂಕ್, ನಕಲಿ ಪ್ರೊಫೈಲ್ ಬಗ್ಗೆ ಎಚ್ಚರವಿರಲಿ ಅಸುರಕ್ಷಿತ ಲಿಂಕ್, ಮೇಲ್ ಸಂದೇಶ ಗಳಿಗೆ ಪ್ರತಿಕ್ರಿಯಿ ವಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಡಿಜಿಟಲ್ ಬಂಧನ ಹಗರಣದಲ್ಲಿ ವಂಚಕರು ತಮ್ಮ ಇಂಟರ್ ನೆಟ್ ಬಳಕೆದಾರನು ವಂಚಿಸಲು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಅಂತಹ ಯಾವುದೇ ಮಾಹಿತಿ ಬಂದರೆ ಸೈಬರ್ ಸಹಾಯವಾಣಿಗೆ ವರದಿ ಡಿಜಿಟಲ್ ಅರೆಸ್ಟ್ ಸ್ಟ್ರಾಮ್ ಎನ್ನುವುದು ಆನ್ಲೈನ್ ವಂಚನೆಯಾಗಿದ್ದು, ಇದರಲ್ಲಿ ಇಂಟರ್ ನೆಟ್ ಬಳಕೆದಾರರ ಹಣವನ್ನು ವಂಚಿಸುತ್ತಾರೆ. ಪ್ಯಾಮರ್ಗಳು ನೆಟ್ ಬಳಕೆದಾರ ಬೆದರಿಸಿ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಾರೆ. ನಂತರ ಅವರು ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಮತ್ತು ಪಾವತಿ ಮಾಡಲು ಅವರ ಮೇಲೆ ಒತ್ತಡ ಹೇರುತ್ತಾರೆ. ಇಂತಹ ಬೆದರಿಕೆ ಕುರಿತು ಎಚ್ಚರಿಕೆ ವಹಿಸಬೇಕು.
ಅಪರಿಚಿತ ಸಂದೇಶಗಳು, ಇ-ಮೇಲ್ ಗಳನ್ನು ಬಳಸಬಾರದು. ಅಂತರ್ಜಾಲ ಬಳಕೆ ಸಂದರ್ಭದಲ್ಲಿ ಬಲವಾದ ಪಾಸವರ್ಡಗಳನ್ನು ಹೊಂದಬೇಕು, ಒಂದೇ ಪಾಸವರ್ಡನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಬಾರದು. ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಕಡ್ಡಾಯವಾಗಿ ಪಾಸವರ್ಡಗಳನ್ನು ಅಳವಡಿಸಬೇಕು. ಸಾಮಾಜಿಕ ಹಾಲತಾಣಗಳ ಬಳಕೆ ಸಂದರ್ಭದಲ್ಲಿ ಅತೀ ಜಾಗರೂಕತೆಯಿಂದ ಬಳಸಬೇಕು. ಅಲ್ಲದೇ ವೈಯಕ್ತಿಕ ಹಾಗೂ ಅನಗತ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು ಯಾವಾಗಲೂ ಪರವಾನಿಗೆ ಪಡೆದ ಸಾಪ್ಟವೇರ್ ಬಳಕೆ, ಅವಧಿ ಮೀರಿದ ಸಾಪ್ಟವೇರ್ ಮತ್ತು ಹಾರ್ಡವೇರ್ ಬಳಸದೇ ಇರುವ ಮೂಲಕ ಡಿಜಿಟಲ್ ಸ್ವಚ್ಛತೆಗೆ ಗಮನ ಹರಿಸಬೇಕು. ವಂಚನೆ ಸಂದರ್ಭದಲ್ಲಿ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.
ಕಾರ್ಯಾಗಾರದಲ್ಲಿ ಪೋಲಿಸ್ ಅಧಿಕಾರಿ ಬಿ.ಆರ್.ಗಡ್ಡೆಕರ, ಲೀಡ್ ಬ್ಯಾಂಕ್ ಮ್ಯಾನೇಜರ ಪ್ರಕಾಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ