National

*ಕಿರಿಯ ವಿದ್ಯಾರ್ಥಿಗಳ ಖಾಸಗಿ ಅಂಗಕ್ಕೆ ಡೆಂಬಲ್ಸ್ ಕಟ್ಟಿ ರ್ಯಾಗಿಂಗ್: ಐವರು ಹಿರಿಯ ವಿದ್ಯಾರ್ಥಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕಿರಿಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಖಾಸಗಿ ಅಂಗಕ್ಕೆ ಡೆಂಬಲ್ಸ್ ಕಟ್ಟಿ ವಿಕೃತಿ ಮೆರೆದು ರ್ಯಾಗಿಂಗ್ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳಿಗೂ ಹೆಚ್ಚು ಕಾಲ ನರ್ಸಿಂಗ್ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಹಿಂಸೆ ನೀಡುವ ಮೂಲಕ ವಿಕೃತಿ ಮೆರೆಯುತ್ತಿದ್ದರು. ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ, ಗುಪ್ತಾಂಗಕ್ಕೆ ಡೆಂಬಲ್ಸ್ ಕಟ್ಟಿ ಗೂಗಿಹಾಕಿ ವಿಕೃತಿ ಮೆರೆಯುತ್ತಿದ್ದರು. ಅಲ್ಲದೇ ಕೈ-ಕಾಲು ದೇಹದ ವಿವಿಧ ಭಾಗಗಳನ್ನು ಕೊಯ್ದು ಅಮಾನುಷವಾಗಿ ವರ್ತಿಸುತ್ತಿದ್ದರು.

ಹೀಗೆ ಗಾಯಗೊಳಿಸಿ, ಗಾಯಕಳ ಮೇಲೆ ಕೆಮಿಕಲ್ ಪೌಡರನ್ನು ಹಾಕಿ ಹಿಂಸಿಸುತ್ತಿದ್ದರು. ಕಿರಿಯ ವಿದ್ಯಾರ್ಥಿಗಳು ನೋವಿನಿಂದ ಕಿರುಚಾಡಿದರೆ ಬಾಯಿಗೆ ಕೆಮಿಕಲ್ ಲೋಷನ್ ಹಾಕುತ್ತಿದ್ದರು. ವಿಷಯ ಬಾಯ್ಬಿಟ್ಟರೆ ಶೈಕ್ಷಣಿಕ ಭವಿಷ್ಯ ಹಾಳುಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಘಟನೆಗಳಿಂದ ತೀವ್ರವಾಗಿ ನೊಂದ ಮೂವರು ವಿದ್ಯಾರ್ಥಿಗಳು ಮೂರು ತಿಂಗಳ ಬಳಿಕ ಕೊಟ್ಟಾಯಂ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರ್ಯಾಗಿಂಗ್ ನಿಷೇಧ ಕಾಯ್ದೆಯಡಿ ಪೊಲೀಸರು ಐವರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ನರ್ಸಿಂಗ್ ಕಾಲೇಜಿನಿಂದ ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button