Kannada NewsKarnataka NewsLatest

*ಶಿರಸಿ: ಜಲಪಾತದಲ್ಲಿ ಮುಳುಗಿ ಯುವಕರಿಬ್ಬರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಶಿರಸಿ: ಸಿದ್ದಾಪುರ ತಾಲೂಕಿನ ವಾಟೆಹೊಳೆ ಜಲಪಾತದಲ್ಲಿ ಯುವಕರಿಬ್ಬರು ಮುಳುಗಿ ನಾಪತ್ತೆಯಾಗಿದ್ದಾರೆ.

ಶಿರಸಿಯ ಮರಾಠಿಕೊಪ್ಪದ ಅಕ್ಷಯ ಭಟ್ ಮತ್ತು ಸುಹಾಸ್ ಶೆಟ್ಟಿ ಎನ್ನುವವರು ನಾಪತ್ತೆಯಾದವರು ಎಂದು ಪ್ರಾಥಮಿಕ ಮಾಹಿತಿ ಬಂದಿದೆ. 22 ವರ್ಷದ ಈ ಯುವಕರು ಇತರ ನಾಲ್ವರೊಂದಿಗೆ (3 ಬೈಕ್ ನಲ್ಲಿ ತಲಾ ಇಬ್ಬರಂತೆ) ಶುಕ್ರವಾರ ವಾಟೆಹೊಳೆ ಜಲಪಾತಕ್ಕೆ ತೆರಳಿದ್ದರು.

ಸಂಜೆ 5 ಗಂಟೆ ಹೊತ್ತಿಗೆ ಈ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದಾಪುರ ಪೊಲೀಸರು ಕಾಣೆಯಾದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ :

ಇಂದು ದಿನಾಂಕ 14/2 /2025 ರಂದು ಸಿರ್ಸಿ ಇಂದ  ನಿಲ್ಕುಂದ ಪಂಚಾಯತಿಯ ನೀಲ್ಕುಂದ ಗ್ರಾಮದ ವಾಟೆಹೊಳೆ ಫಾಲ್ಸ್ ನೋಡಲು ಬಂದ ಆರು ಜನ ಪ್ರವಾಸಿಗರಲ್ಲಿ ಎರಡು ಮಂದಿ ಅಂದಾಜು ಸಂಜೆ 5.00 ಗಂಟೆ ಸುಮಾರಿಗೆ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಕಾಣೆಯಾದವರು 1) ಅಕ್ಷಯ್ ಪರಮೇಶ್ವರ ಭಟ್ ಅಂದಾಜು ವಯಸ್ಸು 22 ಸಾಕಿನ್ ಸಿರ್ಸಿ 2) ಸುಹಾಸ ಶೆಟ್ಟಿ ಸಾಕಿನ ಮರಾಠಿ ಕೊಪ್ಪ ಅಂದಾಜು ವಯಸ್ಸು 22 ಇರುತ್ತದೆ ಎಂಬ ಪ್ರಾಥಮಿಕ ಮಾಹಿತಿಯನ್ನು ಸಲ್ಲಿಸಿದೆ.

ಡಿವೈಎಸ್‌ಪಿ ಕೆ.ಎಲ್. ಗಣೇಶ ಸಿದ್ದಾಪುರ ಇನಸ್ಪೆಕ್ಟರ್ ಜೆ.ಬಿ. ಸೀತಾರಾಮ, ಪಿಎಸ್‌ಐ ಅನಿಲ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಅಲ್ಲದೆ ಮುಳುಗುತಜ್ಞ ಶಿರಸಿಯ ಮಾರಿಕಾಂಬಾ ಲೈಫ್ ಗಾರ್ಡನ ಗೋಪಾಲ ಗೌಡ ಹಾಗೂ ತಂಡ ಸ್ಥಳದಲ್ಲೆ ಬೀಡುಬಿಟ್ಟಿದ್ದು, ಮುಳುಗಿದ ಯುವಕರನ್ನು ತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.

News updates:
ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತಿಯ ನೀಲ್ಕುಂದ ಗ್ರಾಮದ ವಾಟೆಹೊಳೆ ಫಾಲ್ಸ್ ನಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಈರ್ವರು ಶವವಾಗಿ ಪತ್ತೆಯಾಗಿದ್ದಾರೆ.ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್ (22) ಹಾಗು ಮರಾಠಿಕೊಪ್ಪದ ಜೋಡಕಟ್ಟೆ ನಿವಾಸಿಯಾಗಿದ್ದ ಸುಹಾಸ ಶೆಟ್ಟಿ (22) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button