Kannada NewsKarnataka NewsLatest

ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಜೊಲ್ಲೆ ಪಾದಯಾತ್ರೆ

 ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಮಹಾತ್ಮ ಗಾಂಧೀಜಿ ಅವರ ೧೫೦ ನೇ ಜಯಂತಿ ಅಂಗವಾಗಿ ಪ್ರತಿ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ ೧೫೦ ಕಿ.ಮೀ. ಪಾದಯಾತ್ರೆ ಮಾಡಿ ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಸಲಹೆ ಮೆರೆಗೆ ತಾಲೂಕಿನ ಮಲಿಕವಾಡ ಗ್ರಾಮದಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪಾದಯಾತ್ರೆ ನಡೆಸಿದರು.
  ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಮಲಿಕವಾಡ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ವಡಗೋಲ, ಭೈನಾಕವಾಡಿ, ಸದಲಗಾ, ಶಮನೇವಾಡಿ, ಶಿರದವಾಡ, ಜನವಾಡ ಗ್ರಾಮದಲ್ಲಿ ಪಾದಯಾತ್ರೆ ನಡೆಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬೫೦ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಪಾದಯಾತ್ರೆಯಲ್ಲಿ ಗಾಂಧೀಜಿ ಅವರ ತತ್ವ, ವಿಚಾರಧಾರೆ, ಹಾಗೂ ಸ್ವಚ್ಛ ಭಾರತ, ಜಲಶಕ್ತಿ ಸಂರಕ್ಷಣೆ ಮತ್ತು ವ್ಯಸನ ಮುಕ್ತ ಭಾರತದ ಕುರಿತು, ಪ್ಲಾಸ್ಟಿಕ್ ಮಕ್ತ ಸಮಾಜ ನಿರ್ಮಾಣ ಮಾಡಬೇಕೆಂಬ ಗಾಂಧೀಜಿ ಅವರ ಕಂಡ ಕನಸನ್ನು ಇಂದಿನ ಪ್ರಧಾನಿ ಮೋದಿ ಅವರು ಸಾಕಾರಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಭದ್ರ ಭಾರತ ದೇಶ ನಿರ್ಮಾಣವಾಗುತ್ತಿದೆ. ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಜತೆಗೆ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನೂ ಆಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ರಾಮಗೊಂಡಾ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚೇತನ ಪಾಟೀಲ, ರಾಜು ಪಾಟೀಲ, ಅಣ್ಣಪ್ಪ ಇಂಗಳೆ, ಸುನೀಲ ದೇಶಪಾಂಡೆ, ಚೇತನ ದೇಶಪಾಂಡೆ, ಅಣ್ಣಪ್ಪ ಖೋತ, ಪ್ರಕಾಶ ಪಾಟೀಲ, ಬಸವರಾಜ ಗುಂಡಕಲ್ಲೆ, ರಮೇಶ ಮಾನೆ, ರಾಜು ಅಮೃತಸಮ್ಮನವರ, ಬಾಳಗೊಂಡಾ ಪಾಟೀಲ, ಆನಂದ ಪಾಟೀಲ, ಹೇಮಂತ ಶಿಂಗೆ, ಅಭಿನಂದನ ಪಾಟೀಲ, ಸಚೀನ ಪಾಟೀಲ, ಲಕ್ಷ್ಮೀಕಾಂತ ಹಾಲಪ್ಪನ್ನವರ, ತಾತ್ಯಾಸಾಬ ಮತ್ತಿವಾಡೆ, ಪ್ರಶಾಂತ ಕರಂಗಳೆ, ತಾತ್ಯಾಸಾಬ ನಿಡಗುಂದೆ, ಜಯಕುಮಾರ ಖೋತ, ಉದಯ ಖೋತ, ಪಿಂಟು ಖೋತ, ಅಭಯ ಖೋತ, ಜೀತೆಶ ಖೋತ, ಉದಯ ಖೋತ, ಬಾವುಸಾಬ ಖೋತ, ಕುಮಾರ ಹೆರಗೆ, ಅನ್ನಾಸೋ ಪಾಟೀಲ, ಅನಿಲ ಚವ್ಹಾಣ, ಅಶೋಕ ಪಾಟೀಲ, ಸಂದೀಪ ಕಾಂಬಳೆ, ಉದಯ ಪಾಟೀಲ, ಪಿಂಟು ತಾರದಾಳೆ, ರಮೇಶ ಚಗಲೆ, ಉದಯ ಪಾಟೀಲ, ಅಣ್ಣಾ ಪಾಟೀಲ, ಬಾಳು ಪಾಟೀಲ, ನೂರಾರು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button