
ಪ್ರಗತಿವಾಹಿನಿ ಸುದ್ದಿ: ಖ್ಯಾತ ಹಿರಿಯ ನಿರ್ದೇಶಕ ಎಸ್ ಉಮೇಶ್ ಇಂದು ವಿಧಿವಶರಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಇಂದು ಇವರ ಅಂತ್ಯಕ್ರಿಯೆ ನಡೆಯಲಿದೆ.
ಎಸ್ ಉಮೇಶ್ ಅವರು 1974ರಲ್ಲಿ ಚಿತ್ರರಂಗವನ್ನು ಪ್ರವೇಶಿಸಿ, ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರ ನಿರ್ದೆಶನದ ‘ಅವಳೇ ನನ್ನ ಹೆಂಡ್ತಿ’ ಆ ಕಾಲಕ್ಕೆ ಜನ ಮನ ಗೆದ್ದಿತ್ತು. ಎಸ್.ಉಮೇಶ್ ಅವರಿಗೆ ಅಪಾರವಾದ ಹೆಸರನ್ನು ತಂದು ಕೊಟ್ಟಿತ್ತು. ಇಷ್ಟೇ ಅಲ್ಲದೇ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ರಿಮೇಕ್ ಕೂಡ ಆಗಿತ್ತು. ತಮಿಳಿನಲ್ಲಿ ಎಸ್ ಉಮೇಶ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದರು. ಇನ್ನು. ಹಿಂದಿಯಲ್ಲಿ ಅವಳೇ ನನ್ನ ಹೆಂಡ್ತಿ ಚಿತ್ರದ ರಿಮೇಕ್ನಲ್ಲಿ ಅಮೀರ್ ಖಾನ್, ಕಾಶಿನಾಥ್ ನಿರ್ವಹಿಸಿದ್ದ ಪಾತ್ರವನ್ನು ನಿರ್ವಹಿಸಿದ್ದರು.
1988ರಲ್ಲಿ ಕಾಶಿನಾಥ್ ಅಭಿನಯದ ‘ಅವಳೇ ನನ್ನ ಹೆಂಡ್ತಿ’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದರು. ಬಳಿಕ ಅವರು ಪ್ರೇಮ ಪರೀಕ್ಷೆ, ಬನ್ನಿ ಒಂದ್ಬಲ ನೋಡಿ, ಸಿಡಿದೆದ್ದ ಗಂಡು, ದಾಯಾದಿ, ತುಂಬಿದ ಮನೆ, ಹೀಗೆ ಸ್ಯಾಂಡಲ್ವುಡ್ಗೆ 24 ಚಿತ್ರಗಳನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ