
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಉತ್ಸಾಹದ ಗ್ರಂಥದಿಂಡಿ ಮೆರವಣಿಗೆ ನಡೆಯಿತು.
ಸಂಸತ್ತಿನಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರು, ರಾಜರ್ಷಿ ಶಾಹೂ ಮಹಾರಾಜರು, ಮಹಾತ್ಮಾ ಜ್ಯೋತಿಬಾ ಫೂಲೆ, ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ದಿಂಡಿಗೆ ಚಾಲನೆಯನ್ನು ನೀಡಲಾಯಿತು.
ಸಮ್ಮೇಳನದ ಮುಖ್ಯ ಆಯೋಜಕರಾದ ಸಹಜ ಸಂಸ್ಥೆಯ ಅಧ್ಯಕ್ಷ ಸಂಜಯ ನಹಾರ್, ನ್ಯಾಷನಲ್ ಬುಕ್ ಟ್ರಸ್ಟಿನ ಚೇರಮನ್ ಮೀಲಿಂದ್ ಮರಾಠೆ, ನಿರ್ಗಮಿತ ಸಮ್ಮೇಳನಾಧ್ಯಕ್ಷ ಡಾ. ಡಾ. ರವೀಂದ್ರ ಶೋಭಣೆ, ರಾಜ್ಯದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಕಾಸ್ ಖಾರಗೆ, ಸಾಹಿತಿ ಶರದ್ ಗೋರೆ ಭಾಗಿಯಾಗಿದ್ದರು.
ಹರಿ ನಾಮಜಪ, ಢೋಲ್ ತಾಶಾ, ಸಾಹಿತ್ಯಾಧಾರಿತ ರೂಪಕಗಳು, ಮರಾಠಿ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣದಲ್ಲಿ ಮರಾಠಿ ಭಾಷಿಕರು ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಭಾಗಿಯಾಗಿ, ಮರಾಠಿ ಭಾಷಿಕರು ಜೈ ಭವಾನಿ, ಜೈ ಶಿವಾಜೀ ಘೋಷನೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಗಮನಸೆಳೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ