Politics

*ಕ್ಷೇತ್ರದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ*

ಪ್ರಗತಿವಾಹಿನಿ ಸುದ್ದಿ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ  ಸಂತೋಷ್ ಲಾಡ್ ಅವರ 50 ನೇ ಜನ್ಮದಿನದ ಅಂಗವಾಗಿ ಇಂದು ಹಾಗೂ ನಾಳೆ  ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

ಇಂದು ಅಳ್ನಾವರದಲ್ಲಿ ಸಂಜೆ 5 ಗಂಟೆಗೆ ಕೆರೆ ಶಾಲೆ ಮೈದಾನದಲ್ಲಿ ಹಾಗೂ 24. ರಂದು ಕಲಘಟಗಿಯ ಅಮೃತ ನಿವಾಸದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜೀ ಕನ್ನಡ, ಕಲರ್ಸ್ ಕನ್ನಡ ರಿಯಾಲಿಟಿ ಶೋ ಕಲಾವಿದರಿಂದ ಹಾಗೂ ಕಾಮಿಡಿ ಕಿಲಾಡಿ ಕಲಾವಿದರು, ಸರಿಗಮಪ ಗಾಯಕರು ಹಾಗೂ ಡಿಕೆಡಿ ಶೋನ ಕಲಾವಿದರಿಂದ ಮಹಾ ಮನೋರಂಜನೆ ಇರಲಿದೆ.

ಈ ಕಾರ್ಯಕ್ರಮಗಳಲ್ಲಿ ಕನ್ನಡ, ಮರಾಠಿ ಜನಪದ ಗಾಯಕ ಗಾಯಕ ಈಶ್ವರ್, ಕಾಮಿಡಿ ಕಿಲಾಡಿಯ ಸೂರ್ಯ ಕುಂದಾಪುರ, ಜನಪದ ಗಾಯಕಿ ಶ್ರೀದೇವಿ, ಸರಿಗಮಪ ಗಾಯಕಿ ವಸುಶ್ರೀ, ಕನ್ನಡ ಕೋಗಿಲೆ ಗಾಯಕ ಶ್ರವಣಕುಮಾರ, ಕಾಮಿಡಿ ಕಿಲಾಡಿಯ ದೀಪಿಕಾ ಹಾಗೂ ಅಪ್ಪಣ್ಣ ರಾಮದುರ್ಗ ಅವರು ಭಾಗವಹಿಸಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಕಲಘಟಗಿ –  ಅಳ್ನಾವರ ವಿಧಾನಸಭಾ ಕ್ಷೇತ್ರದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ಅಲ್ಲದೆ ಗುರುವಂದನಾ ಕಾರ್ಯಕ್ರಮ ಸಹ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪಕ್ಷದ ಹಲವಾರು ನಾಯಕರು, ಜನಪ್ರತಿನಿದಿಗಳು, ವಿವಿದ ಕ್ಷೇತ್ರದ ಗಣ್ಯರು, ವಿವಿಧ ರಂಗದ ಸಾಧಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಈ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈಗಾಗಲೇ ಸಿದ್ಧತೆ ಭರದಿಂದ ಸಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button