Belagavi NewsBelgaum NewsKannada NewsKarnataka NewsNationalPolitics
*ಎಂಇಎಸ್ ಪುಂಡರಿಂದ ಹಲ್ಲೆಗೊಳಗಾದ ನಿರ್ವಾಹಕನ ಆರೋಗ್ಯ ವಿಚಾರಿಸಿದ ಸಚಿವ ರಾಮಲಿಂಗಾ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಹಲ್ಲೆಗೆ ಒಳಗಾದ ನಿರ್ವಾಹಕನ ಆರೋಗ್ಯ ವಿಚಾರಿಸಿದರು.
ಎಂಇಎಸ್ ಪುಂಡರಿಂದ ಹಲ್ಲೆಗೊಳಗಾದ ಮಹಾದೇವಪ್ಪ ಹುಕ್ಕೇರಿ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ವಿಚಾರಿಸಲು ಬೆಂಗಳೂರಿನಿಂದ ಆರೋಗ್ಯ ಸಚಿವ ರಾಮಲಿಂಗ ರೆಡ್ಡಿಯವರು ಆಗಮಿಸಿದರು.
ಸಚಿವರು ಆರೋಗ್ಯ ವಿಚಾರಿಸಿದ ವೇಳೆ ತನ್ನ ಮೇಲೆ ಸುಳ್ಳು ಪೋಕ್ಸೋ ಕೇಸ್ ಹಾಕಿದ್ದಾರೆ ಎಂದು ನಿರ್ವಾಹಕ ಕಣ್ಣಿರು ಹಾಕಿದರು. ಅದಕ್ಕೆ ಇಡೀ ಇಲಾಖೆ ನಿಮ್ಮ ಜೊತೆ ಇದೆ ಎಂದು ಹಲ್ಲೆಗೊಳಗಾದ ನಿರ್ವಾಹಕನಿಗೆ ಸಚಿವ ರಾಮಲಿಂಗ ರೆಡ್ಡಿಯವರು ಧೈರ್ಯ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ