Belagavi NewsBelgaum NewsBusinessKannada NewsKarnataka NewsLatest

*ಚಿಕ್ಕೋಡಿಯಲ್ಲಿ ಮಂಗಳವಾರ, ಬುಧವಾರ ಚೈತನ್ಯೋತ್ಸವ*

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಇಲ್ಲಿಯ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಂಪೂರ್ಣ ಅಭಿವೃದ್ದಿಪಡಿಸಲಾದ ಚೈತನ್ಯ ವಿಹಾರ ಲೇಔಟ್ ನಲ್ಲಿ ಸೈಟ್ ಗಳ ಮಾರಾಟ ಮೇಳ ಆಯೋಜಿಸಲಾಗಿದೆ.

ಮಂಗಳವಾರ ಮತ್ತು ಬುಧವಾರ 2 ದಿನಗಳ ಚೈತನ್ಯೋತ್ಸವ ಆಚರಿಸಲಾಗುತ್ತಿದ್ದು, ಸೈಟ್ ಗಳ ಮಾರಾಟದ ಉದ್ಘಾಟನೆ ಕಾರ್ಯಕ್ರಮ ಇದಾಗಿದೆ. ಎರಡೂ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಚಿಕ್ಕೋಡಿ ಪ್ರವಾಸಿ ಮಂದಿರ (ಐಬಿ)ದ ಪಕ್ಕದಲ್ಲಿ, ಪದ್ಮಾ ಮಂಗಲ ಕಾರ್ಯಾಲಯದ ಸಮೀಪವಿರುವ ಇಂದಿರಾ ನಗರದ ಚೈತನ್ಯ ವಿಹಾರ ಬಡಾವಣೆಯಲ್ಲಿ ಸೈಟ್ ಗಳ ಮಾರಾಟ ಮೇಳ ನಡೆಯಲಿದೆ.

ಬೆಳಗಾವಿಯ ಖ್ಯಾತ ಬಿಲ್ಡರ್ ಚೈತನ್ಯ ಕುಲಕರ್ಣಿ ಅವರ ಚೈತನ್ಯ ಅಸೋಸಿಯೇಟ್ಸ್ ನಿಂದ ಚಿಕ್ಕೋಡಿಯ ಪ್ರತಿಷ್ಠಿತ ಇಂದಿರಾ ನಗರದಲ್ಲಿ ನೂತನ ಬಡಾವಣೆ ನಿರ್ಮಾಣವಾಗಿದೆ. ಎನ್ ಎ, ಇ ಆಸ್ತಿ, ಕೆಜೆಪಿ ಅಪ್ರೂವಲ್ ಸೇರಿದಂತೆ ಸಂಪೂರ್ಣ ಕಾನೂನು ಬದ್ಧವಾಗಿ, ಸಕಲ ಸೌಲಭ್ಯಗಳನ್ನೊಳಗೊಂಡಿರುವ ಬಡಾವಣೆ ಇದಾಗಿದೆ.

ವಿವಿಧ ಅಳತೆಯ 90 ಸೈಟ್ ಗಳನ್ನು ಹೊಂದಿರುವ ಈ ಬಡಾವಣೆಯಲ್ಲಿ ಸೈಟ್ ಗಳ ಮಾರಾಟವನ್ನು ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಹಿರಿಯ ನ್ಯಾಯವಾದಿ, ಅಲ್ಪಸಂಖ್ಯಾತ ಆಯೋಗದ ಮಾಜಿ ಚೇರಮನ್ ಧನ್ಯಕುಮಾರ ಗುಂಡೆ, ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ ಮಾಂಜ್ರೇಕರ್, ಜೀವವಿಮಾ ನಿಗಮದ ಇಅಭಿವೃದ್ಧಿ ಅಧಿಕಾರಿ ಆನಂದ ಅರವರೆ, ಸಿದ್ಧಿವಿನಾಯಕ ಕ್ರೆಡಿಟ್ ಸೌಹಾರ್ದ ಸಂಘದ ಸಂಸ್ಥಾಪಕ ಚೇರಮನ್ ಸಂಜಯ ಅಡಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Home add -Advt

ಚಿಕ್ಕೋಡಿಯ ಅತ್ಯಂತ ಪ್ರತಿಷ್ಠಿತವಾಗಿರುವ ಈ ಬಡಾವಣೆಯಲ್ಲಿ ಸೈಟ್ ಗಳನ್ನು ಬುಕ್ ಮಾಡಲು ಈ ಮೇಳದ ಮೂಲಕ ವಿಶಿಷ್ಟವಾದ ಅವಕಾಶ ಮಾಡಿಕೊಡಲಾಗಿದೆ.

ಆಸಕ್ತರು – 9538865303 ಅಥವಾ 9538865300 ನಂಬರ್ ಸಂಪರ್ಕಿಸಬಹುದು ಎಂದು ಚೈತನ್ಯ ಅಸೋಸಿಯೇಟ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button