
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮರಾಠಿ ಪುಂಡರಿಂದ ಕನ್ನಡಿಗ ಕಂಡಕ್ಟರ್ ಮೇಲೆ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಕರವೇ ರೊಚ್ಚಿಗೆದ್ದಿದ್ದು, ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಕನ್ನಡಿಗರ ಮೇಲೆ MES ದೌರ್ಜನ್ಯ ನಿಲ್ಲಿಸಬೇಕು. ಸರ್ಕಾರ ಕನ್ನಡಿಗರ ನೆರವಿಗೆ ಬರಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, MES, ಶಿವಸೇನೆ ಕಾರ್ಯಕರ್ತರು ಭಯೋತ್ಪಾದಕರ ರೀತಿ ವರ್ತಿಸುತ್ತಿದ್ದಾರೆ. ಪುಂಡರನ್ನು ಗಡಿಪಾರು ಮಾಡಬೇಕು ಎಂದು ಹೇಳಿದರು. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಬೇಡಿ. ಕಾರಣವೇ ಇಲ್ಲದೇ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲು. ಹಲ್ಲೆ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಲಾಗಿದೆ. ಕನ್ನಡಿಗರ ನೆಲದಲ್ಲಿ ಎಂಇಎಸ್ ಪುಂಡರು ಬಂದು ಕನ್ನಡಿಗರ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಉದ್ಧಟತನ ನಡೆಸುತ್ತಿದ್ದರೂ ಇಲ್ಲಿನ ರಾಜಕಾರಣಿಗಳಿಗೆ ನಾಚಿಕೆ ಅಗೋದಿಲ್ವಾ? ಪೊಲೀಸರು ಏನು ಮಾಡುತ್ತಿದ್ದಾರೆ? ಪೋಕ್ಸೋ ಕೇಸ್ ದಾಖಲಿಸಿರುವ ಇನ್ಸೆಕ್ಟರ್ ಅಮಾನತು ಮಾಡಿ ಎಂದು ಕಿಡಿಕಾರಿದರು.
ನಿರಂತರವಾಗಿ ಕನ್ನಡಿಗರ ಮೇಲೆ ದೌರ್ಜನ್ಯ ಆಗುತ್ತಿದೆ. ಇದಕ್ಕೆ ಕೊನೆ ಹಾಡಬೇಕು. ಕನ್ನಡಿಗರು ಇನ್ಮುಂದೆ ತಕ್ಕ ಉತ್ತರ ಕೊಡಲಿದ್ದಾರೆ. ಕನ್ನಡಿಗರ ತಾಳ್ಮೆ ಹಾಗೂ ಕೋಪವನ್ನು ಕೆಣಕಬೇಡಿ. ಗೃಹ ಸಚಿವರೇ ನಿಮ್ಮ ರಾಜಕೀಯ ಕೆಲಸಗಳನ್ನು ಬದಿಗಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ