*5 ದಿನಗಳಿಂದ ವಿದ್ಯಾರ್ಥಿ ನಾಪತ್ತೆಯಾದರೂ ಇನ್ನೂ ಸಿಗದ ಸುಳಿವು: ಅನುಮಾನ ಹುಟ್ಟುಸಿದ ಘಟನೆ: ತೀವ್ರಗೊಂಡ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಕಳೆದ 5 ದಿನಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಯಲ್ಲಿ ನಡೆದಿದೆ.
ದಿಗಂತ್ ನಾಪತ್ತೆಯಗೈರುವ ವಿದ್ಯಾರ್ಥಿ. ಮನೆಯಲ್ಲಿ ಪರೀಕ್ಷೆ ಹಾಲ್ಟ್ ಟಿಕೆಟ್ ತಂದಿಟ್ಟು ಫೆ.27ರ ಸಂಜೆ 7 ಗಂಟೆಗೆ ಹೊರಗೆ ಹೋದವನು ಏಕಏಕಿ ಕಣ್ಮರೆಯಾಗಿದ್ದಾನೆ. ವಿದ್ಯಾರ್ಥಿ ನಾಪತ್ತೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿದ್ಯಾರ್ಥಿ ನಾಪತ್ತೆ ಹಿಂದೆ ಗಂಜಾ ಗ್ಯಾಂಗ್ ಇದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಅಲ್ಲದೇ ವಿದ್ಯಾರ್ಥಿಯ ಚಪ್ಪಲಿ ಹೈವೆ ಬಳಿ ಪತ್ತೆಯಾಗಿದ್ದು, ಚಪ್ಪಲಿ ಮೇಲೆ ರಕ್ತದ ಕಲೆ ಇದೆ. ಇದೆಲ್ಲವೂ ಆತಂಕವನ್ನುಂಟು ಮಾಡಿದೆ.
ಐದು ದಿನಗಳಿಂದ ವಿದ್ಯಾರ್ಥಿ ನಾಪತ್ತೆಯಾದರು ಪೊಲೀಸರು ಹುಡುಕುವ ಕೆಲಸ ಮಡುತ್ತಿಲ್ಲ. ಪೊಲೀಸ್ ಇಲಕಹೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಇಂದು ಪರಂಗಿಪೇಟೆ ಬಂದ್ ಗೆ ಕರೆ ನೀಡಿರುವ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತಿದ್ದಾರೆ. ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿ ಪತ್ತೆಮಾಡದಿದ್ದಲ್ಲಿ ಹೋರಟ ಇನ್ನಷ್ಟು ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ