National

*ತಂದೆ-ತಾಯಿ-ಸಹೋದರಿಯನ್ನು ಬರ್ಬರವಾಗಿ ಹತ್ಯೆಗೈದ ಯುವಕ*

ಪ್ರಗತಿವಾಹಿನಿ ಸುದ್ದಿ: 21 ವರ್ಷದ ಯುವಕನೊಬ್ಬ ತನ್ನ ತಂದೆ-ತಾಯಿ ಹಾಗೂ ಸಹೋದರಿಯನ್ನೇ ಬರ್ಬರವಗೈ ಕೊಲೆಗೈದಿರುವ ಘಟನೆ ನಡೆದಿದೆ

ಓಡಿಶದಾ ಜಗತ್ಸಿಂಗ್ ಪುರದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಸೂರ್ಯಕಾಂತ್ ಸೇಥಿ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆ-ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ.

ಪ್ರಶಾಂತ್ ಸೇಥಿ ಅಲಿಯಾಸ್ ಕಾಲಿಯಾ (65), ಪತ್ನಿ ಕನಕಲತಾ (62) ಹಾಗೂ ಮಗಳು ರೋಸ್ಲಿನ್ ಕೊಲೆಯಾದವರು ಎಂದು ಗುರುತಿಸಲಾಗಿದೆ.

ರಾತ್ರಿ ಕುಟುಂಬದವರ ಜೊತೆ ಯುವಕ ಸೂರ್ಯಕಾಂತ್ ಜಗಳವಾಡಿದ್ದ. ಕೋಪದಬರದಲ್ಲಿ ಬೆಳಗಾಗುವಷ್ಟರಲ್ಲಿ ತಂದೆ-ತಾಯಿ ಹಾಗೂ ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಸಾವಿಸಿದ್ದಾನೆ. ಬೆಳಿಗ್ಗೆ ಮನೆಯಲ್ಲಿ ರಕ್ತದ ಕಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button