Belagavi NewsBelgaum NewsKarnataka News
*ಬೆಳಗಾವಿ: ನರ್ಸಿಂಗ್ ವಿದ್ಯಾರ್ಥಿನಿ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ನಡೆದಿದ್ದ ನರ್ಸಿಂಗ್ ವಿದ್ಯಾರ್ಥಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾನೇ ಸ್ವ ಇಚ್ಛೆಯಿಂದ ಹೋಗಿದ್ದಾಗಿ ಯುವತಿ ತಿಳಿಸಿದ್ದಾಳೆ.
19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ರಾಧಿಕಾ ಮುಚ್ಚಂಡಿ ನಾಪತ್ತೆಯಾಗಿದ್ದಳು. ಅಪಹರಣ ಪ್ರಕರಣ ದಾಖಲಾಗಿತ್ತು. ಇದೀಗ ಯುವತಿ, ನನ್ನನ್ನು ಯಾರೂ ಅಪಹರಿಸಿಲ್ಲ. ಸದ್ರುದ್ದೀನ್ ಬೆಪಾರಿ ಹಾಗೂ ನನೌ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ನನ್ನ ತಾಯಿ ಮದುವೆ ತೀವ್ರವಾಗಿ ವಿರೋಧಿಸುತ್ತಿದ್ದರು. ಹಾಗಾಗಿ ನಾನೇ ಸ್ವ ಇಚ್ಛೆಯಿಂದ ಸದ್ರುದ್ದೀನ್ ಜೊತೆ ಹೋಗಿದ್ದಾಗಿ ತಿಳಿಸಿದ್ದಾಳೆ.
ರಾಧಿಕಾ ಮುಚ್ಚಂಡಿ ಬೆಳಗಾವಿಗ್ರಾಮಾಂತರ ಠಾಣೆ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾಳೆ. ಇಬ್ಬರ ಹೇಳಿಕೆ ಪಡೆದು ಪೊಲೀಸರು ವಾಪಸ್ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ