Belagavi NewsBelgaum NewsKarnataka News

*ನೃತ್ಯ ಕಲಾವಿದೆ ಉಷಾ ಬಸಪ್ಪಗೆ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು (ಮಾರ್ಚ್ 8) ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಅಭಿವೃದ್ಧಿ ಸಚಿವೆ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ನೃತ್ಯ ಕಲಾವಿದರೂ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರೂ ಆದ ವಿದುಷಿ ಶ್ರೀಮತಿ ಉಷಾ ಬಸಪ್ಪ ಅವರಿಗೆ “ಕಿತ್ತೂರು ರಾಣಿ ಚೆನ್ನಮ್ಮ”ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.


ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ : ಬೆಂಗಳೂರಿನ ಉಷಾ ಬಸಪ್ಪ ವ್ಯಾಸಂಗದಲ್ಲಿ ಬಿ.ಎ. ಪೂರೈಸಿ , ಭರತನಾಟ್ಯದಲ್ಲಿ ವಿದ್ವತ್ ಮಾಡಿದ್ದಾರೆ. ಪ್ರಶಸ್ತಿ-ಗೌರವಗಳು : ನಾಟ್ಯರತ್ನ ಪ್ರಶಸ್ತಿ, ಕಾಯಕಶ್ರೀ ಪ್ರಶಸ್ತಿ, “ಸಿದ್ಧಗಂಗಾ ಪ್ರಶಸ್ತಿ, ಕೆಂಗಲ್ ಹನುಮಂತರಾಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಉಷಾ ಈಗ ಕರ್ನಾಟಕ ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.


ಉಷಾ ಬಸಪ್ಪ ಅವರು ಭರತನಾಟ್ಯ ಕಲಾವಿದೆ ಅಷ್ಟೇ ಅಲ್ಲದೆ ರಂಗಭೂಮಿ ಕಲಾವಿದರು ಸಹ ಆಗಿದ್ದಾರೆ. ಪದ್ಮಿನಿಪ್ರಿಯ ನೃತ್ಯ ಅಕಾಡೆಮಿಯನ್ನು 2011ರಲ್ಲಿ ಸ್ಥಾಪಿಸಿ, ಪ್ರತಿವರ್ಷ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಉಷಾ ಬಸಪ್ಪ ಅವರು ಈವರೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button