Kannada NewsKarnataka NewsLatest

ರಾಷ್ಟ್ರವನ್ನು ಅಭಿವೃದ್ಧಿಯಲ್ಲಿ ಕೊಂಡೊಯ್ಯಬೇಕಿದೆ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಯೋಧ್ಯಾ ಭೂಮಿ ವಿವಾದ ಸಂಬಂಧ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಶಾಸಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಸ್ವಾಗತಿಸಿದ್ದಾರೆ.

ದೇಶದಲ್ಲಿ ಶಾಂತಿ ಕಾಪಾಡುವ ಜೊತೆಗೆ, ರಾಷ್ಟ್ರವನ್ನು ಅಭಿವೃದ್ಧಿಯಲ್ಲಿ ಕೊಂಡೊಯ್ಯಬೇಕಿದೆ.  ಸರ್ವ ಧರ್ಮ ಸಮಭಾವ ಎನ್ನುವ ಧ್ಯೇಯದೊಂದಿಗೆ ಮುಂದಿನ ದಿನಗಳಲ್ಲಿ ಎಲ್ಲರೂ  ಕೆಲಸ ಮಾಡಬೇಕು. ಈ ದಿಸೆಯಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ. ಇದು ಯಾರ ಪರ, ಯಾರ ವಿರುದ್ಧವೂ ಅಲ್ಲ. ದೇಶದ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

ಸುದೀರ್ಘವಾದ ವಿವಾದಕ್ಕೆ ಸುಪ್ರಿಂ ಕೋರ್ಟ್ ತೀರ್ಪು ತೆರೆ ಎಳೆದಿದೆ. ಹಾಗಾಗಿ ಎಲ್ಲರೂ ತೀರ್ಪನ್ನು ಸ್ವಾಗತಿಸುವ ಜೊತೆಗೆ ಶಾಂತಿ ಕಾಪಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button