
ಪ್ರಗತಿವಾಹಿನಿ ಸುದ್ದಿ: ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಯಾಜ್ ಗೆ ಬೆಂಬಲ ನೀಡಿದ್ದ ಇಬ್ಬರು ಹಿಂದೂ ಯುವಕರನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ನರ್ಸ್ ಸ್ವಾತಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಸ್ವಾತಿ ಕೊಲೆ ಆರೋಪಿ ನಯಾಜ್ ನನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ, ಇದೀಗ ನಯಾಜ್ ಗೆ ಸಾಥ್ ಕೊಟಿದ್ದ ಇಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ದುರ್ಗಾಚಾರಿ ಹಾಗೂ ವಿನಯ್ ಬಂಧಿತ ಆರೋಪಿಗಳು. ಚಿತ್ರದುರ್ಗದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಮಾರ್ಚ್ 3ರಂದು ನಾಪತ್ತೆಯಾಗಿದ್ದ ಸ್ವಾತಿ ಪತ್ತೆಪುರ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ನಯಾಜ್ ಎಂಬಾತ ಪ್ರೀತಿಯ ನಾಟಕವಾಡಿ ಪ್ಲಾನ್ ಮಾಡಿ ಸ್ವಾತಿಯನ್ನು ರಾಣೆಬೆನ್ನೂರಿನ ಸ್ವರ್ಣ ಪಾರ್ಕ್ ಗೆ ಕರೆಸಿಕೊಂಡಿದ್ದ. ಈ ವೇಳೆ ಆತನ ಸ್ನೇಹಿತರಾದ ವಿನಯ್ ಹಾಗೂ ದುರ್ಗಾಚಾರಿ ಕೂಡ ಜೊತೆಗಿದ್ದರು. ಮೂವರು ಸೇರಿ ವಿನಯ್ ಕಾರಿನಲ್ಲಿ ಸ್ವಾತಿಯನ್ನು ರಟ್ಟಿಹಳ್ಳಿ ಬಳಿಯ ಪಾಳುಬಿದ್ದ ಶಾಲೆಗೆ ಕರೆದೊಯ್ದು ಕತ್ತಿಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ವಿನಯ್ ಕಾರಿನಲ್ಲಿಯೇ ಸ್ವಾತಿಯನ್ನು ಪತ್ತೆಪುರ ಬಳಿಯ ತುಂಗಭದ್ರಾ ನದಿಗೆ ಎಸೆದು ಹೋಗಿದ್ದಾರೆ.
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.