Belagavi NewsBelgaum NewsKannada NewsKarnataka News

*ಮಂಗಳವಾರ ಲಿಂಗಾಯತ ಬಿಸಿನೆಸ್ ಫೋರಮ್ ಕಾರ್ಯನಿರ್ವಹಣಾ ಸಮಿತಿಯ ಪದಗ್ರಹಣ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲಿಂಗಾಯತ ಬಿಸಿನೆಸ್ ಫೋರಮ್, ಬೆಳಗಾವಿ ( ಲಿಂಗಾಯತ ವ್ಯಾಪಾರಿ ಸಂಘಟನೆ)ಯ 2025- 27ನೇ ಸಾಲಿನ ಕಾರ್ಯನಿರ್ವಹಣಾ ಸಮಿತಿಯ ಪದಗ್ರಹಣ ಸಮಾರಂಭ ಮಂಗಳವಾರ ( ಏಪ್ರಿಲ್ 8) ಹಿಂದವಾಡಿಯ ಐಎಂಇಆರ್ ಸಭಾಗೃಹದಲ್ಲಿ ನಡೆಯಲಿದೆ.

ಸಂಜೆ 6.30ಕ್ಕೆ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಶೋಕ ಐರನ್ ವರ್ಕ್ಸ ಸಹ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ ಆಗಮಿಸುವರು. ದಿವ್ಯ ಸಾನಿಧ್ಯವನ್ನು ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ವಹಿಸುವರು.

2021ನೇ ವರ್ಷದಲ್ಲಿ ಸ್ಥಾಪಿತವಾದ ಲಿಂಗಾಯತ ಬಿಸಿನೆಸ್ ಫೋರಮ್, ಲಿಂಗಾಯತ ಉದ್ಯಮಿಗಳು ಮತ್ತು ವೃತ್ತಿಪರರ ನಡುವೆ ಬೆಳವಣಿಗೆಗೆ, ಸಹಕಾರ ಹಾಗೂ ಸಂವಹನೆಯ ಅವಕಾಶಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಈ ವೇದಿಕೆ ವ್ಯಾಪಾರ ಸಂಪರ್ಕಗಳಿಗೆ ಮಾತ್ರವಲ್ಲದೆ, ಜ್ಞಾನ ಹಂಚಿಕೆ, ಹೊಸ ಅವಕಾಶಗಳ ಅನ್ವೇಷಣೆ, ಮತ್ತು ಉದ್ಯಮಶೀಲತೆಯ ಉತ್ತೇಜನೆಗೆ ಸಹ ಅನೇಕ ಅವಕಾಶಗಳನ್ನು ಒದಗಿಸುತ್ತದೆ.

ಹೊಸ ಕಾರ್ಯನಿರ್ವಹಣಾ ಸಮಿತಿಯ ಪದಾಧಿಕಾರಿಗಳು:

Home add -Advt

ಲಿಂಗರಾಜ ಜಗಜಂಪಿ – ಅಧ್ಯಕ್ಷರು

ರಾಜಶೇಖರ ಶೀಲವಂತ – ಉಪಾಧ್ಯಕ್ಷರು

ಸಚಿನ್ ಬೈಲವಾಡ – ಕಾರ್ಯದರ್ಶಿ

ಸಂತೋಷ ಪಾವಟೆ – ಸಹ ಕಾರ್ಯದರ್ಶಿ

ಜ್ಯೋತಿ ನಿಂಬಾಳ – ಖಜಾಂಚಿ. 

Related Articles

Back to top button