Belagavi NewsBelgaum NewsKarnataka NewsPolitics

*ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕು: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಜಾತಿಗಣತಿ ವರದಿ ಮಂಡನೆಗೆ ಇನ್ನು 1 ವರ್ಷ ಕಾಲ ಬೇಕಾಗುವುದು. ಇದು ಬಹಳ ಜಟಿಲವಾದ ಸಮಸ್ಯೆ ಆದ್ದರಿಂದ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಲು ಕನಿಷ್ಠ 1 ವರ್ಷ ಬೇಕೆಂದು ಸತೀಶ್ ಜಾರಕಿಹೊಳಿ ಜಾತಿಗಣತಿ ವರದಿ ಮಂಡನೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಸಂಜಯನಗರ ನಿವಾಸದಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಜಾತಿಗಣತಿಗೆ 10 ವರ್ಷ ಆಗಿದೆ. ಈಗ ಇದರ ಅಂಕಿ ಅಂಶಗಳ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಆ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ಅದರ ಬಗ್ಗೆ ಚರ್ಚೆಯಾಗಬೇಕಿದೆ ಎಂದಿದ್ದಾರೆ.

ಕೆಲವೊಂದು ಸಮುದಾಯಗಳಿಗೆ ಈ ಅಂಕಿ ಅಂಶಗಳು ಸಮಾಧಾನ ತಂದಿರುವುದಿಲ್ಲ. ಅದನ್ನು ಸರಿಪಡಿಸಿ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button