Kannada NewsKarnataka NewsLatest

22 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಅಭಯ್ ಪಾಟೀಲ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಸ್ತೆ ಒಳ ಚರಂಡಿ, ಗಟಾರ ಇಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದ ಬೆಳಗಾವಿಯ ಶಾಸ್ತ್ರ ನಗರದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಭಾನುವಾರ ಮುಂಜಾನೆ ಚಾಲನೆ ನೀಡಿದರು.
ಕಳೆದ ಅವಧಿಯಲ್ಲಿ ಅತ್ಯಂತ ಜನದಟ್ಟಣೆ ಇರುವ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ. ಶಾಸ್ತ್ರಿ ನಗರವನ್ನು ಮಾದರಿ ಬಡಾವಣೆಯನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ವಾಗ್ದಾನ ಮಾಡಿದ ಅಭಯ ಪಾಟೀಲ, ಈ ಪರಿಸರ ಕೆಳಪ್ರದೇಶ ಮತ್ತು ಕರಿ ಮಣ್ಣಿನ ಪ್ರದೇಶವಾಗಿರುವುದರಿಂದ ಡಾಂಬರು ರಸ್ತೆ ಪದೇ ಪದೇ ಹಾಳಾಗುತ್ತಿದೆ.
 ಮೊದಲನೆಯ ಹಂತದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ  ಹಾಗೂ ಎರಡನೆಯ ಹಂತದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಾಸ್ತ್ರೀನಗರ,  ಗೂಡಶೇಡ್ ರೋಡ್,  ಅಟ್ಲೆಚಾಳ, ಹುಲಬತ್ತಿ ಕಾಲನಿ ಪರಿಸರ,  ಮಹಾದ್ವಾರ ರೋಡ್,  ಕಪಿಲೇಶ್ವರ ಕಾಲನಿ  ಭಾಗದಲ್ಲಿ ಪೇವರ್ಸ ರೋಡ್,  ಕಾಂಕ್ರೀಟ್ ರಸ್ತೆ,  ಗಟಾರ,  ಒಳಚರಂಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button