Education

*ಎಸೆಸೆಲ್ಸಿ ಫಲಿತಾಂಶ ಇದೆ ವಾರದಲ್ಲಿ ಪ್ರಕಟ..?*

ಪ್ರಗತಿವಾಹಿನಿ ಸುದ್ದಿ: ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಮುಗಿದು ಸುಮಾರು 20 ದಿನ ಕಳೆದಿದೆ. ಅಷ್ಟರಲ್ಲೆ ಉತ್ತರ ಪತ್ರಿಕೆ ಮೌಲ್ಯಮಾಪನ ಆಗಿದ್ದು, ಮೇ,2 ಅಥವಾ 3 ರಂದು ಫಲಿತಾಂಶ ಹೊರ ಬಿಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರೀಕ್ಷೆ -1 ರ ಫಲಿತಾಂಶ ಬಂದ ಬಳಿಕ ಪರೀಕ್ಷೆ -2 ಹಾಗೂ ಪರೀಕ್ಷೆ -3 ಫಲಿತಾಂಶ ತ್ವರಿತಗತಿಯಲ್ಲಿ ಪ್ರಕಟವಾಗಲಿದೆ. ಇದರಿಂದ ನಪಾಸಾದ ವಿದ್ಯಾರ್ಥಿಗಳಿಗೂ ಸಹ ಕಾಲೇಜು ಸೇರಲು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.

ಈಗಾಗಲೇ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕ್ರಿಯೆ ಮುಗಿದಿದ್ದು, ಕಂಪ್ಯೂಟರ್ ದಾಖಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಅಥವಾ ಸಿಇಟಿ ಪರೀಕ್ಷೆಯ ಫಲಿತಾಂಶವು ಮೇ ಮೂರನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button