
ಪ್ರಗತಿವಾಹಿನಿ ಸುದ್ದಿ: ಕಸ ಸಂಗ್ರಹಿಸುತ್ತಿದ್ದ ಲಾರಿ ಹರಿದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ಈ ದುರಂತ ಸಂಭವಿಸಿದೆ. ಹಮಿದಾ ಬಾನು ಮೃತ ಬಾಲಕಿ. ಹುಬ್ಬಳ್ಳಿ-ಧಾರವಾದ ಮಹಾನಗರ ಪಾಲಿಕೆಯ ಕಸ ಸಂಗ್ರಹದ ಲಾರಿ ಏಕಾಏಕಿ ಬಾಲಕಿ ಮೇಲೆ ಹರಿಸಿದ್ದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.