Latest

*ಸತತ ಎರಡು ದಿನಗಳಿಂದ ಭಾರಿ ಇಳಿಕೆ ಕಂಡ ಚಿನ್ನ*

ಪ್ರಗತಿವಾಹಿನಿ ಸುದ್ದಿ : ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಒಂದೇ ಸಮನೆ ಏರಿಕೆ ಕಾಣುತ್ತಾ ಗಗನಕ್ಕೇರಿದ್ದ ಚಿನ್ನದ ಬೆಲೆ ಇದೀಗ ಇಳಿಮುಖವಾಗುತ್ತಿದೆ. ಸತತ ಎರಡು ದಿನ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ‌ನಿನ್ನೆ 24 ಕ್ಯಾರೆಟ್‌ನ ಅಪರಂಜಿ ಚಿನ್ನದ 10 ಗ್ರಾಂ ಬೆಲೆ 540 ರೂಪಾಯಿ ಇಳಿಕೆಯಾಗಿದ್ದರೆ, ಇಂದು 2130 ರೂ ಇಳಿಕೆಯಾಗಿದೆ‌. ಸದ್ಯ 93,930 ರೂಪಾಯಿಗೆ ಬಂದು ತಲುಪಿದೆ.

Home add -Advt

ಇನ್ನು 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ ನಿನ್ನೆ 500 ರೂಪಾಯಿ ಇಳಿಕೆಯಾಗಿದ್ದು, ಇಂದು 1950 ರೂಪಾಯಿ ಇಳಿಕೆಯಾಗಿದೆ. 86100 ರೂಪಾಯಿಗೆ ಬಂದು ತಲುಪಿದೆ.

ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳು ಚಿನ್ನ ಸೇರಿದಂತೆ ವಿವಿಧ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಚಿನ್ನ ಖರೀದಿಸುವವರಿಗೆ ಇದು ಸಕಾಲವಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

Back to top button