Karnataka NewsPolitics

*ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ: ಕಾಂಗ್ರೆಸ್ ಕಾರ್ಯರ್ತರು ಅರೆಸ್ಟ್*

ಪ್ರಗತವಾಹಿನಿ ಸುದ್ದಿ : ಕಾಂಗ್ರೆಸ್ ಕಚೇರಿ ಸುಟ್ಟು ಹಾಕಿದ ಪ್ರಕರಣದವನ್ನು ಭೇದಿಸಿರುವ ಪೊಲೀಸರಿಗೆ ಶಾಕ್ ಎದುರಾಗಿದೆ. ಕಾಂಗ್ರೆಸ್ ಕಚೇರಿಯನ್ನು ಸುಟ್ಟಿದ್ದು ಬೇರೆ ಯಾರು ಅಲ್ಲ, ಕಾಂಗ್ರೆಸ್ ಕಾರ್ಯಕರ್ತ ಎಂಬುವುದು ಬಹಿರಂಗವಾಗಿದೆ.‌

ಹೌದು.. ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರೋ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಇಬ್ಬರ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಮಹಿಳಾ ಘಟಕದ ಅಧ್ಯಕ್ಷೆ ಬದಲಾವಣೆ ಕಾರಣಕ್ಕೆ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ನಿಲೋಫರ್ ಬಾದಲ್ ಆಯ್ಕೆಯಾಗಿದ್ದರು. ಆದ್ದರಿಂದ ತನ್ನ ಪತ್ನಿ ಮಂಜುಳಾರನ್ನು ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಸಿದಕ್ಕೆ ಪತಿ ಶಂಕ‌ರ್ ಗೂಳಿ ಕೆರಳಿದ್ದ. ಅದೇ ಕಾರಣಕ್ಕೆ ಕಾಂಗ್ರೆಸ್ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗುತ್ತಿದೆ.

ಪಿಯು ಕಾಲೇಜು ಉಪನ್ಯಾಸಕನಾಗಿರುವ ಶಂಕರ್ ಗೂಳಿ, ರೌಡಿಶೀಟರ್ ಜೊತೆಗೂಡಿ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದಾನೆ. 10 ಲೀಟರ್ ಪೆಟ್ರೋಲ್ ಸುರಿದು ಕೊಳ್ಳಿ ಇಟ್ಟಿದ್ದು ಗೊತ್ತಾಗಿದೆ. ಶಂಕರ್‌ಗೆ ರೌಡಿಶೀಟ‌ರ್ ಬಾಪುಗೌಡ ಅಗತೀರ್ಥ ಎಂಬುವವನು ಸಾಥ್ ಕೊಟ್ಟಿದ್ದ ಎಂದೂ ಹೇಳಲಾಗುತ್ತಿದೆ. 

Home add -Advt

ಸದ್ಯ ಶಂಕರ್ ಬಂಧನವಾಗಿದ್ದು ರೌಡಿಶೀಟರ್ ಬಾಪುಗೌಡನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ.

Related Articles

Back to top button