Kannada NewsKarnataka News

ನಿಸ್ವಾರ್ಥಸೇವೆಯಲ್ಲಿ ತೊಡಗಿದಂತವರಿಗೆ ಪ್ರಶಸ್ತಿಗಳು ಹುಡಕಿಕೊಂಡುಬರುತ್ತವೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ; ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಾರ್ವಜನಿಕರ ನಿಸ್ವಾರ್ಥಸೇವೆಯಲ್ಲಿ ತೊಡಗಿದಂತವರಿಗೆ ಪ್ರಶಸ್ತಿಗಳು ಹುಡಕಿಕೊಂಡುಬರುತ್ತವೆ ಎಂದು ಉಚ್ಚನ್ಯಾಯಾಲಯದ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

ಅವರು ಬೆಂಗಳೂರಿನ ಕಲಾಕ್ಷೇತ್ರದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದದಲ್ಲಿ ಹಮ್ಮಿಕೊಂಡ ನ್ಯಾಯವಾದಿ ಭೀಮಸೇನ ಬಾಗಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಮಾತನಾಡಿದರು.

ಗ್ರಾಮಿಣ ಮಟ್ಟದಲ್ಲಿ ನ್ಯಾಯವಾದಿ ವೃತಿಯ ಜೊತೆಗೆ ಹಲವಾರು ಸಂಘಸಂಸ್ಥೆಗಳ ಅಧ್ಯಕ್ಷ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಸಮಾಜ ಸೇವೆ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಪಾಘನೀಯವಾಗಿದೆ ಎಂದರು.

ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ ಭಿಮಸೇನ ಬಾಗಿ ಅವರು ಈಗಾಲೇ ಹಲವಾರು ಸಹಕಾರಿ ಸಂಘಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮಮನಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಎಸ್,ಡಿವಿಎಸ್ ಸಂಘದ ನಿರ್ದೇಶಕರಾಗಿ ಆಯ್ಕೆಮಾಡಿಕೊಂಡಿದ್ದಾರೆ. ಬಾಗಿ ಅವರು ಇನ್ನೂ ಹೆಚ್ಚು ಹೆಚ್ಚು ಸಾರ್ವಜನಿಕರ ಸೇವೆಗೈಲೆಂದು ಹಾರೈಸಿದರು.
ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮಿಗಳು ಆರ್ಶಿವಚನ ನೀಡಿ ಮಾತನಾಡಿದರು.
ಸಂಘಟನೆ ಸದಸ್ಯರು , ಜನಪ್ರತಿನಿಧಿಗಳು, ಸಾಹಿತ್ಯಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button