Kannada NewsLatestWorld

*ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದ ಶುಭಾಂಶು ಶುಕ್ಲಾ*

ಪ್ರಗತಿವಾಹಿನಿ ಸುದ್ದಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ -ISSಗೆ ಪ್ರಯಾಣ ಬೆಳೆಸಿರುವ ಎರಡನೇ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ‘ಇದು ನನ್ನ ಹೆಮ್ಮೆಯ ಕ್ಷಣಗಳು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ನಾಲ್ವರು ಗಗನಯಾತ್ರಿಕರನ್ನು ಹೊತ್ತ Axiom-4 ರಾಕೆಟ್ ಇಂದು ಮಧ್ಯಾಹ್ನ 12.01 ಕ್ಕೆ ಫ್ಲೊರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಮೊದಲ ಹಂತವನ್ನು ನೌಕೆ ಯಶಸ್ವಿಯಾಗಿ ತಲುಪಿದೆ. 39 ವರ್ಷದ ಶುಭಾಂಶು ಶುಕ್ಲಾ ಅಂತರಿಕ್ಷ ಯಾನ ಕೈಗೊಂಡಿರುವ ಎರಡನೇ ಗಗನಯಾನಿಯಾಗಿದ್ದಾರೆ.

Home add -Advt

ಗಗನಯಾನದ ಬಗ್ಗೆ ಸಂತಸ ಹಂಚಿಕೊಂಡಿರುವ ಶುಭಾಂಶು ಶುಕ್ಲಾ, ‘ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ. ತ್ರಿವರ್ಣ ಧ್ವಜ ನಾವು ನಿಮ್ಮೆಲ್ಲರೊಂದಿಗೆ ಇದ್ದೇನೆ ಎಂಬ ಸಂದೇಶವನ್ನು ಸಾರುತ್ತದೆ. ಇದು ಐಎಸ್ ಎಸ್ ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ ಭಾರತದ ಮಾನವಸಹಿತ ಅಂತರಿಕ್ಷಯಾನದ ಪ್ರಾರಂಭವಾಗಿದೆ’ ಎಂದು ತಿಳಿಸಿದ್ದಾರೆ

ನಾವು ಭೂಮಿಯ ಸುತ್ತ ಸೆಕೆಂಡಿಗೆ 7.5ಕಿ.ಮೀ ವೇಗದಲ್ಲಿ ಸುತ್ತುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Back to top button